ಲೋಕದರ್ಶನ ವರದಿ
ಮುಗಳಖೋಡ,21: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಶ್ರೀ ರೇಣುಕಾದೇವಿ 26ನೇ ಜಾತ್ರಾ ಮಹೋತ್ಸವವು ಗುರವಾರ ದಿ 22 ರಿಂದ ಶುಕ್ರವಾರ ದಿ 23 ವರೆಗೆ ಅತಿ ವಿಜೃಂಭನೆಯಿಂದ ಜರುಗುವುದು.
ಗುರುವಾರ ದಿ 22 ರಂದು ಶ್ರೀ ಡಾ.ಮುರಘರಾಜೇಂದ್ರ ಮಹಾಸ್ವಾಮಿಗಳ ಹಸ್ತದಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದು. ರಾತ್ರಿ 9 ಗಂಟೆಗೆ ಸ್ಥಳಿಯ ಮೇಳದವರಿಂದ ಆಧ್ಯಾತ್ಮ ವಿಷಯಗಳಿಂದ ಡೊಳ್ಳಿನ ಪದಗಳು ಚೌಡಕಿ ಪದಗಳು ನಡೆಯುವವು.
ಶುಕ್ರವಾರ ದಿ 23 ರಂದು ಮುಂಜಾನೆ 6 ಗಂಟೆಯಿಂದ ಶ್ರೀ ರೇಣುಕಾದೇವಿಗೆ ಮಹಾ ಅಭಿಷೇಕ ಪ್ರಾರಂಭವಾಗುವುದು. ನಂತರ 9 ಗಂಟೆಗೆ ಗ್ರಾಮದ ಸಕಲ ಭಕ್ತರು ಆರತಿ ಕುಂಭಗಳ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ದೇವಿಯ ಭವ್ಯ ಮೆರಣಿಗೆ ನಡೆಯುವುದು. ಮಧ್ಯಾಹ್ನ 12 ಗಂಟೆಗೆ ದೇವಿಯ ಹಡ್ಲಗಿ ತುಂಬುವ ಕಾರ್ಯಕ್ರಮ ನಡೆಯುವುದು. ನಂತರ 01 ಗಂಟೆಯಿಂದ ಮಹಾಪ್ರಸಾದ ನಡೆಯುವುದು. ರಾತ್ರಿ 10 ಗಂಟೆಗೆ ಮದರಖಂಡಿಯ ಶ್ರೀ ಮಲ್ಲಿಕಾಜರ್ುನ ಪ್ರಸಾದಿತ ನಾಟ್ಯ ಸಂಘದಿಂದ "ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ಎಂಬ ಭಕ್ತಿ ಪ್ರದಾನ ನಾಟಕ ನಡೆಯುವುದು. ಪಟ್ಟಣದ ಎಲ್ಲ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.