ಹಾವೇರಿ: ಮಾ.21: ಜಿಲ್ಲೆಯಾದ್ಯಂತ ಕೊರೋನಾ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಹೋಟೆಲ್ ಹಾಗೂ ಬಾರ್ಗಳನ್ನು ಬಂದ್ ಮಾಡಬೇಕು. ಸಾರ್ವಜನಿಕರು ಹೋಟೆಲ್ಗಳಲ್ಲಿ ಕುಳಿತು ತಿಂಡಿ ತಿನ್ನುವಂತಿಲ್ಲ. ಕೇವಲ ಒಂದು ಕೌಂಟರ್ ತೆರೆದು ಊಟ ಹಾಗೂ ತಿಂಡಿಯನ್ನು ಪಾಸರ್್ಲ್ ತೆಗೆದುಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹೋಟೆಲ್ ಮಾಲೀಕರ ಹಾಗೂ ಐ.ಎಂ.ಎ. ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಶನಿವಾರ ಸಂಜೆಯಿಂದಲೇ ಜಿಲ್ಲೆಯ ಎಲ್ಲ ರೆಸ್ಟೋರೆಂಟ್, ಉಪಹಾರ ಗೃಹ, ಹೋಟೆಲ್, ಕೆಫೆಗಳಲ್ಲಿ ಊಟ ಮಾಡುವುದನ್ನು ನಿಷೇದಿಸಲಾಗಿದೆ. ಆದಾಗ್ಯೂ ಹೋಟೆಲ್ನ ಅಡುಗೆ ಮನೆ ತೆರೆದಿದ್ದು ಗ್ರಾಹಕರು ಹೋಟೆಲ್ನಲ್ಲಿ ಆಹಾರವನ್ನು ಖರೀದಿಸಿ ಮನೆಗೆ ಪಾಸರ್್ಲ್ ತೆಗೆದುಕೊಂಡು ಹೋಗಬಹುದು. ಈ ನಿಟ್ಟಿನಲ್ಲಿ ಎಲ್ಲ ಹೋಟೆಲ್ ಮಾಲೀಕರು ಸಹಕರಿಸಿ ಆದೇಶವನ್ನು ಪಾಲಿಸಲು ಸೂಚಿಸಿದರು.
ಎಲ್ಲ ಬಾರ್ಗಳನ್ನು ಮುಚ್ಚಲು ಸಕರ್ಾರ ಪರಿಷ್ಕೃತ ಆದೇಶ ಹೊರಡಿಸಿದೆ. ವೈನ್ ಶಾಪ್ಗಳಲ್ಲಿ ಮದ್ಯಖರೀದಿಮಾಡಿ ಮನೆಗೆ ತೆಗೆದುಕೊಂಡು ಹೋಗಬಹುದು. ಸಣ್ಣ ಸಣ್ಣ ಅಂಗಡಿಗಳು, ಉಪಹಾರ ದಶರ್ಿನಿಗಳಲ್ಲಿ ಗುಂಪಾಗಿ ಗ್ರಾಹಕರಿಗೆ ಅವಕಾಶವಿಲ್ಲ. ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಕೃತಕ ಅಭಾವ ಸೃಷ್ಟಿಮಾಡಬೇಡಿ: ಮಾಸ್ಕ್ ಹಾಗೂ ಹ್ಯಾಂಡ್ ವಾಶ್, ಸ್ಯಾನಿಟೈಸರ್ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ಹೆಚ್ಚುವರಿ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಬೇರೆ ಬೇರೆ ಜಿಲ್ಲೆಯಿಂದ ಮಾಸ್ಕ್ ಮತ್ತು ಹ್ಯಾಂಡ್ ವಾಶ್ ಸ್ಯಾನಿಟೈಸರ್ ದಾಸ್ತಾನುಮಾಡಿಕೊಳ್ಳಲು ಔಷಧಿ ಮಾರಾಟಗಾರರಿಗೆ ಸೂಚನೆ ನೀಡಿದರು.
ಐ.ಎಂ.ಎ: ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕೈಗೊಳ್ಳಬೇಕು. ಸುರಕ್ಷತಾ ಸಾಧನಗಳನ್ನು ಬಳಸಬೇಕು. ಐ.ಎಂ.ಎ. ವೈದ್ಯರು ಕೊರೋನಾ ವೈರಸ್ ತಡೆ ಹಾಗೂ ಸಾಮಾಜಿಕ ಅರಿವು ಮೂಡಿಸಲು ಭಾರತೀಯ ವೈದ್ಯಕೀಯ ಸಂಘ ಪಾಲ್ಗೊಳ್ಳಬೇಕು. ಕೊರೋನಾ ಜಾಗೃತಿಗೆ ವಿಡಿಯೋ ಮಾಹಿತಿಗಳನ್ನು ರವಾನಿಸಿ ಜನರಿಗೆ ಅರಿವು ಮೂಡಿಸಬೇಕು. ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ಸೇವೆ, ವೆಂಟಿಲೇಟರ್ ಸೇವೆ ಹಾಗೂ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೆಷನ್ ವಾಡರ್್ಗಳ ಬಳಕೆಗೆ ಅವಕಾಶ ಕಲ್ಪಿಸುವಂತೆ ಐ.ಎಂ.ಎ ಪದಾಧಿಕಾರಿಗಳಿಗೆ ತಿಳಿಸಿದರು.
ವಿದೇಶಿಗರ ಕಣ್ಗಾವಲು: ಜಿಲ್ಲೆಗೆ ವಿದೇಶದಿಂದ ಬಂದ ನಾಗರಿಕ ಮೇಲೆ ತೀವ್ರ ಕಣ್ಗಾವಲಿರಿಸಬೇಕು. ಮಾಹಿತಿಯನ್ನು ಸಂಗ್ರಹಿಸಿ ಪೊಲೀಸ್ ಇಲಾಖೆ ಸ್ಥಳೀಯ ಆಡಳಿತವು ತತಕ್ಷಣ ಮಾಹಿತಿ ನೀಡಬೇಕು. ವಿದೇಶದಿಂದ ಜಿಲ್ಲೆಗೆ ಆಗಮಿಸುವವರ ಪಟ್ಟಿಯನ್ನು ವೈಮಾನಿಕ ಅಧಿಕಾರಿಗಳಿಂದ ಪಡೆಯಬೇಕು. ಸ್ವದೇಶಕ್ಕೆ ಆಗಮಿಸಿದ ಇವರನ್ನು ಕಡ್ಡಾಯವಾಗಿ ತಪಾಸಣೆಗೊಳಿಸಿ ಹೋಂ ಕ್ವಾರೆಂಟನ್ಲ್ಲಿ ನಿಗಾದಲ್ಲಿರಬೇಕು. ಇವರ ಮೇಲೆ 14 ಕೊನೆಯಿಂದ ಹೊರಬರದಂತೆ ಚಲನವಲನಗಳ ಬಗ್ಗೆ ತೀವ್ರ ನಿಗಾವಹಿಸಬೇಕು. ಪೊಲೀಸ್ ಸೇರಿದಂತೆ ಪಕ್ಕದ ಮನೆಯವರು ಈ ಬಗ್ಗೆ ನಿಗಾ ವಹಿಸುವಂತೆ ಸಲಹೆ ನೀಡಿದರು.
ವೆಂಟಿಲೇಟರ್ ವ್ಯವಸ್ಥೆ: ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲ ತಾಲೂಕಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕಾರ್ಯನಿರ್ವಹಣೆ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ಗಳನ್ನು ಗುರುತಿಸಿಕೊಂಡಿರಬೇಕು. ಹೆಚ್ಚುವರಿ ವೆಂಟಿಲೇಟರ್ಗಳ ಖರೀದಿಗೆ ಕ್ರಮವಹಿಸಬೇಕು. ಅರವಳಿಕೆ ತಜ್ಞರ ಕೊರತೆ ಇದ್ದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅಥವಾ ದಾವಣಗೆರೆಯಿಂದ ನಿಯೋಜನೆ ಮೇಲೆ ನೇಮಕಮಾಡಲು ಆರೋಗ್ಯ ಇಲಾಖೆ ವಹಿಸಬೇಕು ಎಂದು ಸೂಚನೆ ನೀಡಿದರು.
ಕೊರೋನಾ ವೈರಸ್ (ಕೋವಿಡ್- 19) ಹರಡುವಿಕೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಸುಳ್ಳು ಸುದ್ದಿ ಹರಡದಂತೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಸಾರಿಗೆ ಪ್ರಾದೇಶಿಕ ಕಚೇರಿ ಸೇರಿದಂತೆ ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಹೆಲ್ಪ್ಡೆಸ್ಕ್ಗಳನ್ನು ಸ್ಥಾಪಿಸಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು. ಸಂತೆ, ಜಾತ್ರೆ, ಉತ್ಸವಗಳನ್ನು ಕಡ್ಡಾಯವಾಗಿ ರದ್ದುಪಡಿಸಿಬೇಕು. ಕಾಯಿಪಲ್ಲೆ ಖರೀದಿಗಾಗಿ ಪ್ರತಿ ಅಂಗಡಿ ಮೂರು ಮೀಟರ್ ಅಂತರದಲ್ಲಿ ಇರುವಂತೆ ವ್ಯವಸ್ಥೆಮಾಡಿ ಸಾರ್ವಜನಿಕರಿಗೆ ದೈನಂದಿನ ಸಾಮಗ್ರಿಗಳ ಖರೀದಿಗೆ ಅವಕಾಶಮಾಡಿಕೊಡಬೇಕು. ಗುಂಪು ಸೇರುವುದನ್ನು ನಿಯಂತ್ರಿಸಬೇಕು. ಪ್ರತಿ ಅಂಗಡಿ, ಸಕರ್ಾರಿ ಕಚೇರಿಗಳಲ್ಲಿ ಕೈ ತೊಳೆಯಲು ಹ್ಯಾಂಡ್ ಸ್ಯಾನಿಟರ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಯೋಮೆಟ್ರಿಕ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಬ್ಯಾಂಕ್ಗಳಲ್ಲಿ, ಎ.ಟಿ.ಎಂ.ಗಳಲ್ಲಿ ಗ್ರಾಹಕರು ಕೈತೊಳೆಯುವ ವ್ಯವಸ್ಥೆಯನ್ನು ಮಾಡಬೇಕು. ಜಾತ್ರೆ, ಧಾಮರ್ಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ಕಠಿಣ ಕ್ರಮಕೈಗೊಳ್ಳಬೇಕು. ಪ್ಯಾಕ್ಟರಿ, ಕಾಖರ್ಾನೆ, ಉತ್ಪಾದಕ ಸಂಸ್ಥೆಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮವಹಿಸಬೇಕು. ಎಪಿಎಂಸಿ ವಹಿವಾಟುಗಳನ್ನು ಇಂದಿನಿಂದಲೇ ಬಂದ್ ಮಾಡಬೇಕು. ಇಂದಿನಿಂದ ಎಪ್ರಿಲ್ 1ರವರೆಗೆ ಸಕರ್ಾರದ ಆದೇಶವನ್ನು ಕಠಿಣವಾಗಿ ಪಾಲಿಸುವಂತೆ ಸೂಚಿಸಿದರು.ಸ್ಥಳೀಯವಾಗಿ ಮಾಸ್ಕ್: ವೈದ್ಯಕೀಯ ಮಾರ್ಗಸೂಚಿಯಂತೆ ಮಾಸ್ಕ್ಗಳ ಸ್ಥಳೀಯವಾಗಿಯೇ ಸಿದ್ದಪಡಿಸಲು ವ್ಯವಸ್ಥೆ ಮಾಡುವ ಕುರಿತಂತೆ ಚಚರ್ಿಸಲಾಯಿತು. ಜಿಲ್ಲೆಯಲ್ಲಿ ಕರೋನಾ ತಡೆಗೆ ಸಮನ್ವಯ ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ತೀಮರ್ಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ದೇವರಾಜು, ಜಿಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಸಸಿ, ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ನಾಗರಾಜ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು, ಐಎಂಎ ಪ್ರತಿನಿಧಿಗಳು, ಹೋಟೆಲ್ ಮಾಲೀಕರ ಸಂಘದ ಪಧಿಕಾರಿಗಳು, ಔಷಧಿ ಮಾರಾಟಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.