ಬೈಲಹೊಂಗಲ 01: ಸಕರ್ಾರಿ ಸೇವೆಯು ಮುಳ್ಳಿನ ನಡಿಗೆಯಾಗಿದ್ದು ನೀಡಿದ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಉಪ ನಿದೆರ್ೇಶಕ ಎನ್. ಮುನಿರಾಜು ಹೇಳಿದರು.
ಅವರು ಪಟ್ಟಣದ ಹೊಸೂರ ರಸ್ತೆಯಲ್ಲಿನ ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ನಡೆದ ಸಮಾಜ ಕಲ್ಯಾಣ ಇಲಾಖೆಯಿಂದ ಜರುಗಿದ ಸಹಾಯಕ ನಿದರ್ೆಶಕ (ಗ್ರೇಡ್ 2) ಎ.ವಸಂತ ಅವರ ವಯೋ ನಿವೃತಿ ಸಮಾರಂಭದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಕರಿಯಲ್ಲಿ ಉದ್ಯೋಗ ಹುದ್ದೆ ಮುಖ್ಯವಲ್ಲ. ಭಗವಂತ ಇಲಾಖೆ ಮೂಲಕ ಸಮಾಜ ಸೇವೆ ಮಾಡುವ ಅವಕಾಶ ನೀಡಿದಾಗ ಕಛೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವತರ್ಿಸಿ ಅವರಿಗೆ ಯೋಜನೆಗಳನ್ನು ತಲುಪಿಸಿದಾಗ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಎ. ವಸಂತ ಅವರು ಸುಮಾರು 34 ವರ್ಷಗಳ ಕಾಲ ಯಾವದೇ ಕಪ್ಪು ಚುಕ್ಕೆ ಬರದಂತೆ ಇಲಾಖೆಗೆ ಕೀತರ್ಿ ತಂದು ಜನರ, ಹಿರಿಯ ಅಧಿಕಾರಿಗಳ ಮನಸ್ಸನ್ನು ಗೆದ್ದಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗಳು ಅವರ ನಡೆ-ನುಡಿಯನ್ನು ಅನುಸರಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ, ಸಕರ್ಾರ ಒದಗಿಸಿಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ದೇವರ ಕೆಲಸದಂತೆ ಕಾಯಕವನ್ನು ಪೂಜಿಸಿ ಯಶಸ್ವಿಯಾಗಿದ್ದಾರೆ. ವಿವಿಧ ಇಲಾಖೆಗಳಲ್ಲಿ ಇಂಥವರು ಅಪರೂಪವಾಗಿದ್ದು ಯಾವದೇ ಕೆಲಸ ನೀಡಿದರು ತಕ್ಷಣವೇ ಕಾರ್ಯ ಪ್ರವೃತರಾಗಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತಹ ಇವರು ವಯೋ ನಿವೃತಿಯ ನಂತರ ಅವರ ಆರೋಗ್ಯ, ಆಯುಷ್ಯ ದ್ವಿಗುಣಗೊಂಡು ಕಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರಲೆಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿಧರ್ೇಶಕ (ಗ್ರೇಡ್ 2) ಎ.ವಸಂತ ಅವರು ಮಾತನಾಡಿ, ಪ್ರಾರಂಭದಲ್ಲಿ ಸೇವೆ ಮಾಡಲು ಈ ಬೈಲಹೊಂಗಲಕ್ಕೆ ಆಗಮಿಸಿದಾಗ ತಳಮಳ ಉಂಟಾಗಿತ್ತು. ನಂತರದ ದಿನಗಳಲ್ಲಿ ಗೊತ್ತಾಯಿತು ಇಲ್ಲಿಯ ಜನ ಸಂಭಾವಿತರು, ಸೌಜನ್ಯದಿಂದ ವತರ್ಿಸುವ ನಾಕರಿಕರೆಂದು. ನಾವು ಜನರಿಗೆ ಯಾವ ರೀತಿ ಸೇವೆ ನೀಡುತ್ತೇವೆಯೋ ಆ ರೀತಿ ಭಗವಂತ ನಮಗೆ ಫಲ ನೀಡುತ್ತಾನೆಂದು ತಿಳಿಸಿದ ಅವರು ನೌಕರಿ ಸಿಗುವದು ಅಪರೂಪದಲ್ಲಿ ಸಿಕ್ಕ ಅವಕಾಶದಲ್ಲಿ ಸಾರ್ಥಕತೆ ಪಡೆಯಬೇಕೆಂದರು.
ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ತಾಲೂಕಾ ವಿವಿಧ ಇಲಾಖೆಯ ಅಧಿಕಾರಿಗಳಿಂದ, ಸಂಘ-ಸಂಸ್ಥೆಗಳಿಂದ ಎ.ವಸಂತ ಅವರನ್ನು ಸತ್ಕರಿಸಲಾಯಿತು.
ತಾ.ಪಂ.ಕಾರ್ಯನಿವರ್ಾಹಕಾಧಿಕಾರ ಎಸ್.ಎಸ್.ಕಾದ್ರೋಳ್ಳಿ, ತಾ.ಪಂ.ಉಪಾಧ್ಯಕ್ಷ ಬಸನಗೌಡಾ ಪಾಟೀಲ, ಶೈಲಾ ವಸಂತ, ಖಾನಾಪೂರ ಸಮಾಜ ಕಲ್ಯಾಣಾಧಿಕಾರಿ ಎಂ.ಜಿ.ಉಣ್ಣಿ, ಕಚೇರಿ ಅಧೀಕ್ಷಕಿ ಕಲಾವತಿ ದೇಶನೂರ, ಪ್ರಥಮ ದಜರ್ೆ ಸಹಾಯಕ ಚಂದ್ರು ಎಚ್.ಎಮ್. ದ್ವೀತೀಯ ದಜರ್ೇ ಸಹಾಯಕ ಬಿ.ಬಿ.ಸೂಳೇಭಾವಿ, ದಲಿತ ಮುಖಂಡ ರಮೇಶ ರಾಯಪ್ಪಗೋಳ, ವಾರ್ಡನರಾದ ಜಗದೀಶ ಅಣ್ಣಿಗೇರಿ, ಎಸ್.ಬಿ.ರೊಳ್ಳಿ, ಎಲ್ಲಾರ ಸದಲಗಿ, ಜಿ.ಎಸ್.ಮೇಟಿ, ಬಸವರಾಜ ಕೌಜಲಗಿ, ಎಮ್.ಎಸ್.ಪಾಟೀಲ, ಎಸ್.ಎಚ್.ಪಠಾಣ, ರೂಪಾ ಜ್ಯೋತಿ, ವಿದ್ಯಾ ದೊಡಮನಿ, ಸುವರ್ಣ ಯರಗಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾಥರ್ಿನಿಯರಿಂದ ಪ್ರಾರ್ಥನೆ ಜರುಗಿತು. ಮಂಜುನಾಥ ತೋಟಗಿ ಸ್ವಾಗತಿಸಿದರು. ಎಮ್.ಎಫ್.ಮಕರವಳ್ಳಿ ನಿರೂಪಿಸಿದರು. ವಿ.ಎಲ್.ನ್ಯಾಮಗೌಡರ ವಂದಿಸಿದರು.