ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಿ.ಕೆ.ಎಚ್. ಶಾಸ್ತ್ರಿಗೆ ಸನ್ಮಾನ
ಗದಗ 11: ವಿಜಯಪುರ ಜಿಲ್ಲಾ ಆಲಮೇಲದಲ್ಲಿ ದಿನಾಂಕ 14 ರಂದು ನಡೆಯಲಿರುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ ಕೆ ಎಚ್ ಶಾಸ್ತ್ರಿ(ಕಡಣಿ) ಇವರನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಯಿತು.
ಗದುಗಿನ ವಿಶ್ವಪ್ರಸಿದ್ದ ವಿರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂ.ಪುಟ್ಟರಾಜ ಗವಾಯಿಗಳ ಸನ್ನಿಧಿಯಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತ ಸಾಹಿತ್ಯ ಕಥಾ ಕೀರ್ತನ ಪುರಾಣ ಪ್ರವಚನ ಗಮಕ ವಾಚನ ಅಧ್ಯಯನ ಮಾಡಿ ಸಂಗೀತದಲ್ಲಿ ಕರ್ನಾಟಕ ಸರಕಾರದ ಸೀನೀಯರ ಗ್ರೇಡ್ ಪ್ರಥಮ ಸ್ಥಾನಲದಲಿ ತೇರ್ಗಡೆಯಾಗಿ ಆಕಾಶವಾಣಿ ಕಲಾವಿದರಾಗಿ ಮಾನ್ಯತೆ ಪಡೆದವರು ಕರ್ನಾಟಕ ಆಂದ್ರ ಪ್ರದೇಶ ಗೋವಾ ರಾಜ್ಯಗಳಲ್ಲಿ ಪ್ರವಚನ ನೀಡಿದ್ದಾರೆ ಈಗಲೂ ನೀಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಮಟ್ಟದ ಕಾಯಽರ್ಕ್ರಮಗಳು ಲಕ್ಕುಂಡಿ ಉತ್ಸವ ಹಂಪಿ ಉತ್ಸವ ಗಳಲ್ಲಿ ಕಥಾ ಈರ್ತನೆ ಗಮಕ ವಾಚನ ತತ್ವಪದ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸುಮಾರು 200 ಭಕ್ತಿಗೀತೆ ಹಾಗೂ ಭಾವಗೀತೆಗಳು ಜಾನಪದ ಮತ್ತು ಕೆಲವು ವಚನಗಳನ್ನು ಬರೆದಿದ್ದಾರೆ 25 ಕ್ಕೂ ಹೆಚ್ಚು ನೂತನ ಶರಣರ ಕಥಾ ಕೀರ್ತನ ಧ್ವನಿ ಸುರುಳಿಗಳು ಹೊರಬಂದಿವೆ. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇದುವರೆಗೂ 11 ಕೃತಿಗಳು ಬೆಳಕು ಕಂಡಿವೆ. ಇವರ ಸಾಧನೆ ಪರಿಚಯಿಸುವ ಪ್ರವಚನ ಪಟು ಪುಸ್ತಕ ಪ್ರಕಟವಾಗಿದೆ.
ಮ ನಿ ಪ್ರ ಬಸವರಾಜ ಮಹಾಸ್ವಾಮಿಗಳು ಬೆಳ್ಳಟ್ಟಿ, ಮಾಜಿ ಅಧ್ಯಕ್ಷ ಎ. ಬಿ. ಹಿರೇಮಠ, ಜಾನಪದ ವಿದ್ವಾಂಸ ಡಾ.ಸಿದ್ದಣ್ಣ ಜಕಬಾಳ, ಲಲಿತಾ ಸಿ ಕೆರಿಮನಿ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಶಿವಾನಂದ ಗಿಡ್ನಂದಿ, ಡಾ.ದತ್ತಪ್ರಸನ್ನ ಪಾಟೀಲ, ಡಿ. ಎಸ್. ಬಾಪುರಿ, ಸಮ್ಮೇಳನಾಧ್ಯಕ್ಷರಿಗೆ ಶುಭ ಹಾರೈಸಿದರು.