ಶರದ್ ಪವಾರ್ ಜನತೆಯೊಂದಿಗೆ ಶುಕ್ರವಾರ ಆನ್ ಲೈನ್ ಸಂವಾದ

ಔರಂಗಾಬಾದ್, ಮಾರ್ಚ್ 27, ಎನ್ ಸಿ ಪಿ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಶರದ್ ಪವಾರ್ ತಮ್ಮ ಫೇಸ್ ಬುಕ್ ಪೇಜ್ ಮೂಲಕ ಮಾರ್ಚ್ 27 ರಂದು ಬೆಳಗ್ಗೆ 11 ಗಂಟೆಗೆ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.ಕೊರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಜನರಿಗೆ ಧೈರ್ಯ ತುಂಬಲು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ವೈದ್ಯಕೀಯ ಕ್ಷೇತ್ರದ ಸವಾಲುಗಳು, ಹಣಕಾಸು ಮುಗ್ಗಟ್ಟು. ಕೃಷಿ ಆದಾಯ, ಕಾನೂನು ಮತ್ತು ಸುವ್ಯವಸ್ಥೆ, ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಅವರು ಚರ್ಚೆ ನಡೆಸಲಿದ್ದಾರೆ. ಆಡಳಿತಾರೂಢ ಶಿವಸೇನೆ ಮತ್ತು  ಕಾಂಗ್ರೆಸ್ ಸರ್ಕಾರದ ಮಿತ್ರ ಪಕ್ಷ ಎನ್ ಸಿ ಪಿ. ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಶರದ್ ಪವಾರ್ ಪ್ರಮುಖ ಪಾತ್ರ ವಹಿಸಿದ್ದರು.