ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ

ಕೊಪ್ಪಳ 30: ಒಂದು ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ನಮ್ಮ ಕನ್ನಡ ನಾಡು, ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿಯಿಂದ ಕೂಡಿದ ಅತ್ಯಂತ ಸಮೃದ್ಧ ಭೂ ಪ್ರದೇಶವಾಗಿತ್ತು. ಇಡೀ ವಿಶ್ವದಲ್ಲಿಯೇ ಅತ್ಯಂತ ಜೀವ ವೈವಿದ್ಯತೆಯಿಂದ ಕೂಡಿದ ಪ್ರದೇಶಗಳಲ್ಲೊಂದಾದ ಸಹ್ಯಾದ್ರಿ ಪರ್ವತಾರಣ್ಯ ನಮ್ಮ ನಾಡಿನ ಹೆಮ್ಮೆಯಾಗಿದೆ. ನಮ್ಮ ಕನ್ನಡನಾಡು "ಭೂ ದೇವಿಯ ಮುಕುಟದ ನವ ಮಣಿ" ಎಂದು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದ್ದಾರೆ. ಇಲ್ಲಿಯ ಪ್ರಕೃತಿ, ಉದ್ಯಾನಗಳು ಚೆಲುವಿನ ನೆಲೆವಿಡಾಗಿದ್ದವು ಎಂಬುದಕ್ಕೆ "ಮರಿ ದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಎಂಬ ಆದಿಕವಿ ಪಂಪನ ಮಾತುಗಳೆ ಸಾಕ್ಷಿ. ಅಂದಿನಿಂದಲೂ ಇಂದಿನವರೆಗೆ ನಾಡಿನೆಲ್ಲೆಡೆ ಉದ್ಯಾನಗಳಲ್ಲಿ ಸೊಬಗು ಹಾಗೂ ಗಿರಿಧಾಮಗಳಲ್ಲಿ ಸೊಗಸನ್ನು ಕಾಣಬಹುದಾಗಿದೆ. ರಾಜ್ಯದ ಪ್ರಮುಖ ಗಿರಿಧಾಮಗಳಾದ ನಂದಿಬೆಟ್ಟದ ನಂದಿಗಿರಿಧಾಮ, ಕೆಮ್ಮಣ್ಣುಗುಂಡಿಯ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಹಾಗೂ  ಕೊಪ್ಪಳ ಜಿಲ್ಲೆಯ ಪಂಪಾವನ ಉದ್ಯಾನವನಗಳು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತಿವೆ

                ಕನರ್ಾಟಕ ರಾಜ್ಯದಲ್ಲಿರುವ 6 ಬೃಹತ್ ಸಾರ್ವಜನಿಕ ಉದ್ಯಾನವನಗಳಲ್ಲಿ ಪಂಪಾವನವೂ ಒಂದು. ಉತ್ತರ ಕನರ್ಾಟಕದ ಅದರಲ್ಲೂ ಹೈದ್ರಾಭಾದ್ ಕನರ್ಾಟಕ ಪ್ರದೇಶದ ಏಕೈಕ ಬೃಹತ್ ಸಾರ್ವಜನಿಕ ಉದ್ಯಾನವನವಾಗಿದೆ. ಹೊಸಪೇಟೆ-ಕೊಪ್ಪಳ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿ 67 ರಲ್ಲಿರುವ ಮುನಿರಾಬಾದ್ (ಹುಲುಗಿ) ಒಂದು ಔದ್ಯೋಗಿಕ ಪ್ರದೇಶವಾಗಿದ್ದು ತುಂಗಾಭದ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟೆಯನ್ನು ನಿಮರ್ಿಸಲಾಗಿದೆ. ಅಣೆಕಟ್ಟೆಯ ಎಡಭಾಗದಲ್ಲಿರುವ ಕೊಪ್ಪಳ ಜಿಲ್ಲೆಯ ಮುನಿರಾಬಾದಿನ ತುಂಗಭದ್ರ ಯೋಜನಾ ಪ್ರದೇಶದ ಕಾಂಪೋಸಿಟ್ ಡ್ಯಾಂ ಪ್ರದೇಶದಲ್ಲಿ ನಿಮರ್ಿಸಿರುವ ಜಪಾನ್ ಮಾದರಿಯ ಉದ್ಯಾನವನವೇ ಪಂಪಾವನ. ಹೊಸಪೇಟೆಯಿಂದ 8 ಕಿ.ಮೀ ಮತ್ತು ಕೊಪ್ಪಳದಿಂದ 20 ಕಿ.ಮೀ. ದೂರದಲ್ಲಿರುವ ಪಂಪಾವನವು  ಪೌರಾಣಿಕವಾಗಿಯೂ ಪ್ರಸಿದ್ಧಿ ಪಡೆದಿರುವುದು.            

                ಉದ್ಯಾನವನದಲ್ಲೀಗ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿ ಏರ್ಪಡಿಸುವ ಫಲಪುಷ್ಪ ಪ್ರದರ್ಶನದ ಮಾದರಿಯಲ್ಲಿ ಪಂಪಾವನದಲ್ಲೂ ಸಹ ಕನ್ನಡ ರಾಜ್ಯೋತ್ಸವದ ಪ್ರಯುಕ್ತ .01 ರಿಂದ .4 ವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸುವರ್ಣ ಕನರ್ಾಟಕ ಉದ್ಯಾನವನಗಳ ಪ್ರತಿಷ್ಠಾನ ಯೋಜನೆಯಡಿ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಮಚಾಯತ್ ಕೊಪ್ಪಳ ಇವರ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

                ಫಲಪುಷ್ಪ ಪ್ರದರ್ಶನದ ವಿಶೇಷತೆಗಳು: 100 ಅಡಿ ಉದ್ದದ 16 ಗೇಟ್ಗಳನ್ನು ಹೊಂದಿದ ಸೇವೆಂತಿಗೆ, ಚೆಂಡುಹೂ, ಬ್ಲೂಡೈಸಿ ಸೇರಿದಂತೆ ಇನ್ನೂ ಹತ್ತಾರು ಹೂವುಗಳಿಂದ ಪುಷ್ಪಾಲಂಕೃತವಾದ ತುಂಗಾಭದ್ರ ಅಣೆಕಟ್ಟು ನಿಮರ್ಾಣ. ಚೆಂಡುಹೂ, ಪೆಟೊನಿಯಾ, ಸಾಲ್ವಿಯಾ, ಕ್ಯಾಲೆಂಡುಲಾ, ಸೆಲೋಷಿಯಾ, ಪ್ಲಾಕ್ಸ್, ಜಿನಿಯಾ, ವಿಂಕಾ, ಆಸ್ಟರ್, ಪ್ಯಾನ್ಸಿ, ಬಿಗೋನಿಯಾ, ಡಯಾಂಥಸ್, ಗಜೇನಿಯಾ, ಟೊರೇನಿಯಾ, ಪಬರ್ಿನಾ, ಜಿರೇನಿಯಂ, ವಿವಿಧ ಬಗೆಯ ವಾಷರ್ಿಕ ಹೂಗಳ ಪ್ರದರ್ಶನ. ಕನ್ನಡ ಸಾಹಿತ್ಯದ ಹಿರಿಮೆಯನ್ನು ಸಾರುವ ಪುಷ್ಪಾಲಂಕೃತ ಸ್ತಬ್ಧ ಚಿತ್ರಗಳು. ಕನ್ನಡದ ರತ್ನತ್ರಯರಾದ ಪಂಪ, ರನ್ನ, ಜನ್ನ. ಕನ್ನಡದ ದಾಸಶ್ರೇಷ್ಟರಾದ ಪುರಂದರದಾಸರು, ಕನಕದಾಸರು, ವ್ಯಾಸರಾಯರು. ಕನ್ನಡದ ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು. ಕನ್ನಡದ ಪ್ರಖ್ಯಾತ ಕವಿ ಶ್ರೇಷ್ಟರಾದ ಕುಮಾರವ್ಯಾಸ, ಲಕ್ಷ್ಮೀಶ, ಹರಿಹರ, ರಾಘವಾಂಕ. ಕನ್ನಡ ಚಕ್ರವತರ್ಿಗಳಾದ ಶ್ರೀ ಕೃಷ್ಣದೇವರಾಯ, ಅಮೋಘವರ್ಷ, ನೃಪತುಂಗ. ವಿಕಟಕವಿ ತೆನಾಲಿರಾಮಕೃಷ್ಣ. ತ್ರಿಪದಿ ಕವಿ ಸರ್ವಜ್ಙ. ಕನ್ನಡದ ದ್ವಜ, ಭುವನೇಶ್ವರಿ, ಕನರ್ಾಟಕ ನಕ್ಷೆ. ಜ್ಙಾನಪೀಠ ಪುರಸ್ಕೃತ ಕನ್ನಡ ಕವಿಗಳು ಹಾಗೂ ಡಿವಿ ಗುಂಡಪ್ಪ. ಮತ್ತು ವಾಣಿಜ್ಯ ಪುಷ್ಪಗಳು, ಸಾಂಪ್ರದಾಯಿಕ ಪುಷ್ಪಗಳು, ಗಿರಿ ಪುಷ್ಪಗಳ ಹಾಗೂ ಜಿಪ್ಸೋಫಲಂ, ಲಿಲ್ಲಿಯಂ, ಸುಗಂಧರಾಜ,ಗ್ಲಾಡಿಯೋಲಸ್, ಅಂಥೋರಿಯಂ, ಸೀತಾಳೆ ಹೂಗಳು, ಜಬರ್ೆರಾ, ಕಾನರ್ೆಶನ್, ಗುಲಾಭಿ, ಸೆವಂತಿಗೆ, ಆಲ್ ಸ್ಟ್ರೋಮೇರಿಯಾ, ಬಡರ್್ ಆಫ್ ಪ್ಯಾರಡೈಸ್, ಡೈಸಿ, ಗೊಲ್ಟನ್ ರಾಡ್ ಪುಷ್ಪಗಳ ಪ್ರದರ್ಶನ. ತೋಟಗಾರಿಕೆ ವಿಭಾಗಗಳಾದ ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳು, ಪುಷ್ಪ ಬೆಳೆಗಳು, ತೋಟದ ಬೆಳೆಗಳು, ಮತ್ತು ಕೊಯ್ಲೋತ್ತರ ನಿರ್ವಹಣೆ ಮತ್ತು ತಾಂತ್ರಿಕತೆಯನ್ನು ಬಿಂಬಿಸುವ ತೋಟಗಾರಿಕೆ ಗೃಹದ ಅನಾವರಣ. ತರಕಾರಿ ಮತ್ತು ಹಣ್ಣುಗಳಿಂದ ವಿವಿಧ ಕಲಾಕೃತಿಗಳ ಕೆತ್ತನೆ ಮತ್ತು ಪ್ರದರ್ಶನ. ಬಹುವಾಷರ್ಿಕ ಹೂ ಗಿಡಗಳು ಮತ್ತು ಅಲಂಕಾರಿಕ ಗಿಡಗಳ ಪ್ರದರ್ಶನ. ವಿವಿಧ ವಾಹನಗಳ ಟೈರ್ ಗಳನ್ನೂ ವಿವಿಧ ವಿನ್ಯಾಸದಲ್ಲಿ ಜೋಡಿಸಿ ಪುಷ್ಪಗಳ ಪ್ರದರ್ಶನ. ಆನೆ, ನವಿಲು, ಜಿರಾಫೆ, ಗೊರಿಲ್ಲಾ ಸೇರಿದಂತೆ ವಿವಿಧ ಪುಷ್ಪಾಲಂಕೃತ ಪ್ರಾಣಿಗಳ ಪ್ರದರ್ಶನ. ಮತ್ತು ಪ್ರತಿದಿನ ಸಂಜೆ ಸಾಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಉಪ ನಿದರ್ೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.