ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಲೋಕದರ್ಶನ ವರದಿ

ಸಂಬರಗಿ 17: ರಾಜ್ಯ ಸರಕಾರ ಗಡಿ ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಇದ್ದರೆ ಶಿಘ್ರದಲ್ಲಿ ಪರ್ಯಾಯಗೋಳಿಸಬೆಕೆಂದು ಆದೇಶ ಮಾಡಿದೆ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಸಮೀತಿ ಅಥಣಿ ತಾಲೂಕಾ ಅಧ್ಯಕ್ಷ ಬಸಗೌಡ ಪಾಟೀಲ ಇವರ ಬಮ್ಮನಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ನಾಲಕು ತಿಂಗಳಾಯಿತು ಅಧಿಕಾರಿ ನಿರ್ಲಕ್ಷದಿಂದ ಶುದ್ಧ ಕುಡಿಯುವ ನೀರನ್ನು ಗ್ರಾಮಸ್ತರಿಗೆ ಸಿಗತ್ತಾಯಿಲ್ಲಾ. ಬೆಸಕಿಯಲ್ಲಿ ನೀರು ಇಲ್ಲದ ಕಾರಣಕ್ಕಾಗಿ ಶುದ್ಧ ನೀರನ್ನುಸಿಗತ್ತಾಯಿಲ್ಲಾ. ಆದರೆ ಮಳೆಗಾಲದ ನೀರ ಇದ್ದು ಶುದ್ಧ ನೀರನ್ನು ಕುಡಿಯಲು ಸಿಗತಾಯಿಲ್ಲಾ.

ರಾಜ್ಯ ಸರಕಾರ ಪ್ರತಿ ಗ್ರಾಮದಲ್ಲಿ ಗ್ರಾಮಸ್ತರಿಗೆ ಶುದ್ಧ ನೀರನ್ನು ಪೂರೈಕೆಗಾಗಿ ಶುದ್ಧ ಕುಡಿಯುವ ನೀರ ಘಟಕ ಸ್ಥಾಪನ ಮಾಡಿದ್ದಾರೆ. ಜನರಿಗೆ ಶುದ್ಧ ಕುಡಿಯುವ ನೀರನಿಂದ ಅನುಕುಲವಾಗಿದ್ದು ಆದರೆ ಘಟಕ ದುರುಸ್ತಿಗೊಂಡನಂತರ ಯಾವ ಅಧಿಕಾರಿ ಕಣ್ಣ ತೇರೆದ ನೋಡತಾಯಿಲ್ಲಾ. 

ಗ್ರಾಮದ ಜನಸಂಖ್ಯೆ ಸೂಮಾರು 3000-3500 ಸಾವಿರ ಇದ್ದು, ಇಲ್ಲಿಯ ಜನರು ವಿಶೇಷವಾಗಿ ತೋಟದ ವಸ್ತಿ ಮನೆಯಲ್ಲಿ ವಾಸವಾಗಿರುತ್ತಾರೆ. ತೋಟದಿಂದ ಗ್ರಾಮಕ್ಕೆ ತರಳಿ ಶುದ್ಧ ಕುಡಿಯುವ ನೀರನ್ನು ಸಾಗಾಣಿಕೆ ಮಾಡುತ್ತಾರೆ. ಆದರೆ ವರ್ಷದಲ್ಲಿ 6 ತಿಂಗಳ ನೀರು ಇದ್ದು ಸ್ಥಗಿತವಾಗುತ್ತದೆ. 6 ತಿಂಗಳ ನೀರು ಇಲ್ಲದೆ ಸ್ಥಗಿತಗೊಳ್ಳುತ್ತಿದೆ. 

ಈ ಗ್ರಾಮ ಅಥಣಿ ತಾಲೂಕಾ ಕೆಂದ್ರದಿಂದ 40 ಕಿ.ಮಿ. ಅಂತರ ದೂರ ಇದ್ದು, ಇಲ್ಲಿ ಯಾವ ಅಧಿಕಾರಿ ಸಮಸ್ಯೆ ಸ್ಪಂಧಿಸಲು ಬರತಾಯಿಲ್ಲಾ. ಗ್ರಾಮದ ಜನರು ಹಲವಾರು ಬಾರಿ ಗ್ರಾಮಸ್ಥರು ಶುದ್ಧ ನೀರಿನ ಸಮಸ್ಯೆ ಕುರಿತು ಜನ ಪ್ರತಿನೀಧಿ ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ಬಂದರು ಯಾವುದೆ ಕ್ರಮ ಕೈಗೊಂಡಿರುವುದಿಲ್ಲಾ ಆ ಕಾರಣ ಶುದ್ಧ ನೀರು ಕುಡಿಯಲು ಗ್ರಾಮಸ್ಥರು ನೀರಿಕ್ಷೇಯಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಶುದ್ಧ ಕುಡಿಯುವ ನೀರನ್ನು ಘಟಕ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದ್ದಾರೆ. 

ಈ ಕುರಿತು ಕ.ರ.ವೆ. ಅಥಣಿ ತಾಲೂಕಾ ಅಧ್ಯಕ್ಷ ಬಸಗೌಡ ಪಾಟೀಲ ಬಮ್ಮನಾಳ ಇವರ ಸಂಪರ್ಕಿಸಿದಾಗ ಈ ಕುರಿತು ನಾನು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇವೆ. ಶಿಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರುಸ್ತಿ ಮಾಡಿ ಪ್ರಾರಂಭಿಸಿದಿಲ್ಲವಾದರೆ ತಿವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.