ನವದೆಹಲಿ, ಅ.22: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂನರ್ಿಯಲ್ಲಿ ಭಾರತದ ಭರವಸೆಯ ಆಟಗಾರ ಶುಭಾಂಕರ್ ಡೇ ಅವರು ಭರ್ಜರಿ ಪ್ರದರ್ಶನ ನೀಡಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಶುಭಾಂಕರ್ 15-21, 21-14, 21-17 ರಿಂದ ಇಂಡೋನೇಷ್ಯಾದ ಟಾಮಿ ಸುಜೀರ್ತೊ ಅವರನ್ನು ಮಣಿಸಿ ಮುನ್ನಡೆದರು. ಆರಂಭದಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದ ಶುಭಾಂಕರ್ ಎರಡನೇ ಹಾಗೂ ಮೂರನೇ ಗೇಮ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿ ಜಯ ಸಾಧಿಸಿದರು. ಎರಡನೇ ಗೇಮ್ ನಲ್ಲಿ ಶುಭಾಂಕರ್ ಅವರು ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಅಲ್ಲದೆ ಸೊಗಸಾದ ಸ್ನ್ಯಾಷ್ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಗಮನ ಸೆಳೆದರು. ಮೂರನೇ ಹಾಗೂ ಕೊನೆಯ ಗೇಮ್ ನಲ್ಲಿ ಮನಮೋಹಕ ಪ್ರದರ್ಶನ ನೀಡಿದ ಡೇ, ಗೆಲುವು ಸಾಧಿಸಿ ಮುನ್ನಡೆದರು.