ಕಾಗವಾಡ 22: ಯಾವುದೇ ಕೆಲಸವಾದರೂ ಬದ್ಧತೆಯಿಂದ ಮಾಡಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ವೃತ್ತಿ ಜೊತೆಗೆ ಕಾರ್ಯತತ್ಪರತೆಯನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಯಾವುದೇ ತರಬೇತಿ ಯಶಸ್ವಿಯಾಗುವುದಕ್ಕೆ ಸಾಧ್ಯವೆಂದು ಪ್ರಾ. ಡಾ.ಎಸ್.ಎ. ಕರ್ಕಿ ಹೇಳಿದರು.
ಅವರು, ಶುಕ್ರವಾರ ದಿ. 21 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಕೋಶ, ಗಣಕ ವಿಜ್ಞಾನ ವಿಭಾಗ, ಮಹಿಳಾ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಆಯ್ದ ಅಂಗನವಾಡಿ ಕಾರ್ಯಕರ್ತೆಯರಿಗೆ 7 ದಿನಗಳ ಉಚಿತ ಕಂಪ್ಯೂಟರ ಮತ್ತು ಸೈಬರ್ ಸೆಕ್ಯೂರಿಟಿ ಎಂಬ ವಿಷಯದ ಕುರಿತು ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೆ.ವ್ಹಿ.ಎಸ್. ತುಗಶೆಟ್ಟಿ ಮಾತನಾಡಿ, ಜಗತ್ತು ಈಗ ಡಿಜಿಟಲ್ ವ್ಯವಸ್ಥೆಯನ್ನು ಬಯಸುತ್ತಿದೆ. ಆದ್ದರಿಂದ ತಂತ್ರಜ್ಞಾನದ ತಿಳುವಳಿಕೆ ಇವತ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯ ಹಮ್ಮಿಕೊಂಡಿರುವ ತರಬೇತಿಯ ಸದುಪಯೋಗವನ್ನು ತಾವೆಲ್ಲರೂ ಪಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ.ಬಿ.ಎ. ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರ ಮೇಲ್ವಿಚಾರಕಿ ಸುಜಾತಾ ಪಾಟೀಲ, ತರಬೇತಿ ಸಂಯೋಜಕ ಡಾ. ಚಂದ್ರಶೇಖರ ವೈ., ಮಾತನಾಡಿದರು.
ಈ ವೇಳೆ ಡಾ.ಎಸ್.ಪಿ. ತಳವಾರ, ಪ್ರೊ.ಬಿ.ಡಿ. ಧಾಮಣ್ಣವರ, ಪ್ರೊ. ಸಾಜಿದ ಇನಾಮದಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ 70 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಎನ್.ಎಂ. ಬಾಗೇವಾಡಿ ಸ್ವಾಗತಿಸಿದರು. ಕು. ರಾಧಿಕಾ ಕುರಣೆ ಪ್ರಾರ್ಥಿಸಿದಳು. ಪ್ರೊ. ಎಸ್.ಎಂ. ಪರಗೌಡಾ, ಪ್ರೊ. ಜೆ.ಹೆಚ್. ರಾಜಾಪೂರೆ ನಿರೂಪಿಸಿದರು. ಪ್ರೊ. ಟಿ.ಬಿ. ಧಬಾಡೆ ವಂದಿಸಿದರು.