ಲೋಕದರ್ಶನ ವರದಿ
ತಾಳಿಕೋಟೆ: ಮಾನಸಿಕವಾದ ಒತ್ತಡಗಳು ಮತ್ತು ಕಿನ್ನತೆಗಳು ಮನುಷ್ಯನಲ್ಲಿ ರೋಗಗಳನ್ನು ಉತ್ಪತ್ತಿ ಮಾಡುವಂತಹ ಕಾರ್ಯಗಳನ್ನು ಮಾಡುತ್ತವೆ ಮಾನಸಿಕವಾಗಿ ಬರುವಂತಹ ಒತ್ತಡದ ಕೆಲಸಗಳನ್ನು ಬದಿಗೊತ್ತಿ ಆರೋಗ್ಯವಂತ ಬಧುಕನ್ನು ಕಟ್ಟಿಕೊಳ್ಳಬೇಕೆಂದು ಡಾ.ನಾಲಬಂದ ಆಸ್ಪತ್ರೆಯ ವೈಧ್ಯ ಡಾ.ಎ.ಎ.ನಾಲಬಂದ ಅವರು ನುಡಿದರು.
ಸ್ಥಳೀಯ ವಿಠ್ಠಲ ಮಂದಿರದಲ್ಲಿ ಬಸವಶ್ರೀ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ನಾಲಬಂದ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಅವರು ಮಾನಸಿಕವಾಗಿ ಕಿನ್ನತೆಗೊಳಪಟ್ಟು ಮಾಡುವ ಕೆಲಸಗಳು ಹಾಗೂ ಅತೀ ಒತ್ತಡಕ್ಕೆ ಬಲಿಯಾಗಿ ಕೆಲಸದಲ್ಲಿ ತೊಡಿಕೊಳ್ಳುವದರಿಂದ ಸಕ್ಕರೆ ಕಾಯಲೆ ಮತ್ತು ಹೃದಯಘಾತ ಕಾಯಲೆಗಳು ಬರುತ್ತವೆ ಒತ್ತಡವಿಲ್ಲದೇ ಮಾಡುವ ಕೆಲಸಗಳು ಉತ್ತಮ ಆರೋಗ್ಯಕ್ಕೆ ಸಾಕ್ಷೀಯಾಗುತ್ತವೆ ಸಕ್ಕರೆ ಕಾಯಲೆ ಎಂಬ ರೋಗ ಹೊಂದಿದವರು ಬಯ ಪಡುವ ಅಗತ್ಯವಿಲ್ಲಾ ದಿನನಿತ್ಯ ಶುದ್ದವಾದ ಗಾಳಿ ಸೇವನೆಗಾಗಿ ನಸುಕಿನ ಜಾವ ವಾಕಿಂಗ್, ಮತ್ತು ಪ್ರತಿನಿತ್ಯ ವ್ಯಾಯಾಮ, ಸಾತ್ವಿಕ ಆಹಾರ ಸೇವನೆಯಿಂದ ಆ ಕಾಯಿಲೆಯನ್ನು ದೂರಿಕರಿಸಬಹುದಾಗಿದೆ ಎಂದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿಜಯಪುರದ ಡಾ.ಕಿರಣ ಚುಳಕಿ ಹಾಗೂ ಡಾ.ಎ.ಆರ್.ಉಮಜರ್ಿ ಸ್ಥಳೀಯ ವೈದ್ಯ ಡಾ.ಎ.ಎ.ನಾಲಬಂದ ತಪಾಸಣೆ ಮಾಡಿದರು. ಈ ಉಚಿತ ಆರೋಗ್ಯ ತಪಾಸಣೆ ಶಿಭಿರದಲ್ಲಿ 400 ಜನ ಸಕ್ಕರೆ ಕಾಯಿಲೆ ಹಾಗೂ ಹೃದಯರೋಗಿಗಳನ್ನು ತಪಾಸಣೆ ಮಾಡಿದ್ದಲ್ಲದೇ ಅವರೆಲ್ಲರಿಗೂ ಸುಮಾರು ಎರಡರಿಂದ ಮೂರು ತಿಂಗಳಿಗಾಗುವಷ್ಟು ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಇದೇ ಸಮಯದಲ್ಲಿ ಉಚಿತ ರಕ್ತ ತಪಾಸಣೆಯನ್ನು ನಡೆಸಲಾಯಿತು. ವೇದಿಕೆಯಲ್ಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವ್ಹಿ.ಎ.ಹಜೇರಿ, ಬಸವಶ್ರೀ ಬ್ಯಾಂಕಿನ ಅಧ್ಯಕ್ಷ ಪವಾಡೆಪ್ಪ ಯಾಳವಾರ ಹಾಗೂ ವೈದ್ಯರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ನಾಲಬಂದ ಆಸ್ಪತ್ರೆಯ ಡಾ.ಎ.ಎ.ನಾಲಬಂದ ವಹಿಸಿದ್ದರು.
ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎ.ಆರ್.ಚೌಧರಿ ಹೃದಯ ಶಸ್ತ್ರ ಚಿಕಿತ್ಸೆಯ 15 ವರ್ಷಗಳ ನಂತರವೂ ತಾವು ಕ್ಷೇಮವಾಗಿರುವ ಬಗ್ಗೆ ಹೇಳಿ ಯಾರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ ಎಂದರು. ಸಾರಿಗೆ ಇಲಾಖೆಯ ಬಸವರಾಜ ಚೋಕಾವಿ ಅವರು ಮಕ್ಕಳು ಬಾಲ್ಯದಲ್ಲಿ ಹೆಚ್ಚು ಸಿಹಿ ತಿನ್ನುವುದರಿಂದ ಸಕ್ಕರೆ ಖಾಯಿಲೆ ಬರುವುದೇ ಎಂಬ ಪ್ರಶ್ನೆಗೆ ಸಕ್ಕರೆ ತಿನ್ನುವುದರಿಂದ ಖಾಯಿಲೆ ಬರದು. ನಮ್ಮ ಆಹಾರ ಅಭ್ಯಾಸ ಜೀವನ ಕ್ರಮಗಳಿಂದ ಈ ರೋಗ ಬರುವುದೆಂದು ವೈದ್ಯರು ವಿವರ ನೀಡಿದರು.
ಈ ಸಮಯದಲ್ಲಿ ಡಾ.ಆನಂದ ಬಟ್, ಡಾ.ಆರ್.ಎಂ.ಕೋಳ್ಯಾಳ, ಬಸವಶ್ರೀ ಬ್ಯಾಂಕಿನ ನಿದರ್ೇಶಕರುಗಳಾದ ಪ್ರಭುಗೌಡ ಮದರಕಲ್ಲ, ಚನ್ನಬಸ್ಸಪ್ಪಗೌಡ ಗದಿಗೆಪ್ಪಗೋಳ, ಎಸ್.ಸಿ.ಪಾಟೀಲ, ಮಲ್ಲಿಕಾಜರ್ುನ ನಾಗರಾಳ, ಧರ್ಮಪ್ಪ ರಾಠೋಡ, ಅಶೋಕ ಹಂಚಲಿ, ರೇಣುಕಾ ಮೂಕೀಹಾಳ, ನಂದಿನಿ ಹೊಸಮನಿ, ಅಮರೇಶ ಬಿರಾದಾರ, ಮೊದಲಾದವರು ಇದ್ದರು. ಬಸವಶ್ರೀ ಬ್ಯಾಂಕಿನ ಹಿರಿಯ ಸಲಹೆಗಾರ ಬಿ.ಆರ್.ಕುಮಟಗಿ ಸ್ವಾಗತಿಸಿದರು. ನಿದರ್ೆಶಕ ಶ್ರೀಕಾಂತ ಪತ್ತಾರ ನಿರ್ವಹಿಸಿದರು. ನಿದರ್ೆಶಕಿ ರೇಣುಕಾ ಹಂಚಲಿ ವಂದಿಸಿದರು.