ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಹೂವಿನ ಹಡಗಲಿ 21: ಹಿರೇಹಡಗಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ . ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಜಯನಗರ.ದೇವದಾಸಿ ಪುನರ್ವಸತಿ ಯೋಜನೆ ವಿಜಯನಗರ. ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರೆಲ್ಲರೂ ಇಲಾಖೆಯ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ದೇವದಾಸಿ ಪದ್ಧತಿ ಇಲ್ಲಿಗೆ ಕೊನೆಗೋಳಿಸಿ.ನಿಮ್ಮ ಆರೋಗ್ಯದ ಕಡೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು. ವೈದ್ಯಾಧಿಕಾರಿ ಡಾ.ವಿನೋದ ಮಾತನಾಡಿ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹೇಳಿದರು. ತಾಲೂಕು ದೇವದಾಸಿ ಮಹಿಳೆಯರ ಯೋಜನುಷ್ಟಾನಾಧಿಕಾರಿ ಎ.ಜಿ.ಹಾಲನಗೌಡ. ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುಳಾ.ಸೌಮ್ಯ.ಶೃತಿ..ದೇವದಾಸಿ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷೆ ಹೆಚ್.ದಂಡೆಮ್ಮ.ಹಲಗಿ ಸುರೇಶ.ದೇವದಾಸಿ ಸಂಘಟನೆ ಮುಖಂಡರಾದ ಅಕ್ಕಮ್ಮ.ಹೋನ್ನಮ್ಮ.ಸೌಭಾಗ್ಯಮ್ಮ.ಹಾಲಮ್ಮ.ಇತರರು ಇದ್ದರು ನಲವತ್ತೈದು ಜನ ಮಹಿಳೆಯರು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದರು.ಒಬ್ಬರಲ್ಲಿ ಯಾವುದೇ ನ್ಯೂ ನ್ಯೂನತೆ ಕಂಡು ಬರಲಿಲ್ಲ ಎಂದು ಆರೋಗ್ಯ ಸಹಾಯಕಿಯರ ತಿಳಿಸಿದರು