ಲೋಕದರ್ಶನ ವರದಿ
ಕುಮಟಾ : ಕೇಂದ್ರದಲ್ಲಿ ಕಾಂಗ್ರೆಸ್ ಸಕರ್ಾರವನ್ನು ತ್ಯಜಿಸಲೇಬೇಕೆಂದು ಜನತೆ ತೆಗೆದುಕೊಂಡ ನಿಧರ್ಾರದಿಂದಲೇ ಇಷ್ಟೊಂದು ಜನಪರ ಯೋಜನೆಗಳು ಮೋದಿ ಸಕರ್ಾರದಿಂದ ಬರಲು ಸಾಧ್ಯವಾಗಿದೆ. ಇನ್ನೂ ಕಾಂಗ್ರೆಸ್ ಸಕರ್ಾರವೇ ಆಡಳಿತದಲ್ಲಿದ್ದರೆ ಇಂಥ ಯಾವ ಯೋಜನೆಯು ಜನತೆಗೆ ಲಭಿಸುತ್ತಿರಲಿಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.
ಅವರು ಮಂಗಳವಾರ ತಾಲೂಕಿನ ಆಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಎಸ್ ಕೆ ಪಿ ಹೈಸ್ಕೂಲ್ ಸಭಾಭವನದಲ್ಲಿ ಮಂಗಳವಾರ ಕೇಂದ್ರ ಫಲಾನುಭವಿಗಳ ಸಭೆ ಹಾಗೂ ಪ್ರಧಾನಮಂತ್ರಿ ಉಜ್ವಲ ಯೋಜನೆಯ 177 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆಯ ಪೂರ್ವದಲ್ಲಿ ನಾವು ಕೊಟ್ಟಂತಹ ಮಾತನ್ನು ಉಳಿಸಿಕೊಂಡಿದ್ದೇವೆ. ಹೀಗೆ ಹತ್ತು ಹಲವಾರು ಯೋಜನೆಗಳನ್ನು ನಮ್ಮ ಪ್ರಧಾನಿಯವರು ತಂದಿದ್ದಾರೆ. ಸದ್ಯದಲ್ಲೇ ಮೋದಿಯವರ ಇನ್ನೊಂದು ಜನಪರ ಆಯುಷ್ಮಾನ್ ಭಾರತ ಎಂಬ ಯೋಜನೆ ಬರಲಿದೆ. ಇದರಿಂದ ಪ್ರತಿಂದು ಕುಟುಂಬಕ್ಕೆ 5 ಲಕ್ಷದವರೆಗಿನ ಜೀವವಿಮೆ ದೊರೆಯಲಿದೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಹಂಚಿಕೆಯಾದಷ್ಟು ಪ್ರಧಾನಮಂತ್ರಿ ಉಜ್ವಲ ಯೋಜನೆಯ 44000 ಸಿಲೆಂಡರ್ಗಳು ಬೇರೆ ಯಾವುದೇ ಜಿಲ್ಲೆಯಲ್ಲಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲಿ ಇದೂ ಒಂದು. ಅಲ್ಲದೇ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಹಲವಷ್ಟು ಅನುದಾನವನ್ನು ಬಿಡುಗಡೆಗೊಳಿಸಿದ್ದೇವೆ. ಉತ್ತರಕನ್ನಡ ಜಿಲ್ಲೆಯ ಯಾಣ ಗ್ರಾಮದ ಅಭಿವೃದ್ಧಿಗಾಗಿ ಮೂರುವರೆ ಕೋಟಿಯಷ್ಟು ಅನುದಾನ ಬಿಡುಗಡೆಗೊಳಿಸಲಿದ್ದೇವೆ. ಕೇಂದ್ರ ಸಕರ್ಾರದಿಂದ ದೊರೆಯುವ ಪ್ರತಿಯೊಂದು ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದರು.
ಶಾಸಕ ದಿನಕರ ಶೆಟ್ಟಿ ವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಕುರಿತು ಜನತೆಗೆ ತಿಳಿಸಿದರು.
ನಂತರ ಸಚಿವ ಅನಂತಕುಮಾರ ಹೆಗಡೆ ಹಾಗೂ ಶಾಸಕ ದಿನಕರ ಶೆಟ್ಟಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ 177 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸಿದರು.
ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಕುಮಾರ ಮಾಕರ್ಾಂಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಧನ ನಾಯಕ, ಪ್ರಮುಖರಾದ ವಿನೋದ ಪ್ರಭು, ವಿನಾಯಕ ಭಟ್, ಪ್ರಶಾಂತ ನಾಯ್ಕ, ಅನಸೂಯಾ ಅಂಬಿಗ, ಹೇಮಂತಕುಮಾರ ಗಾಂವ್ಕರ್, ವಿನಾಯಕ ಅಂಬಿಗ, ನಾಗವೇಣಿ ಹೆಗಡೆ, ಜಿ ಐ ಹೆಗಡೆ, ಪುರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
ಜಿ ಪಂ ಸದಸ್ಯ ಗಜಾನನ ಪೈ ಸ್ವಾಗತಿಸಿದರು. ಲೋಕೇಶ ಹೆಗಡೆ ನಿರೂಪಿಸಿದರು. ಆರ್ ಕೆ ಅಂಬಿಗ ವಂದಿಸಿದರು.