ಕಣ್ಣಿನ ಉಚಿತ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರ
ತಾಳಿಕೋಟಿ 04: ಸಮೀಪದ ಮೂಕಿಹಾಳ ಗ್ರಾಮದಲ್ಲಿ ಹಜರತ್ ಲಾಡ್ಲೆ ಮಶ್ಯಾಕ್ ದರ್ಗಾ ಉರುಸು ಅಂಗವಾಗಿ ಹಮ್ಮಿಕೊಂಡ ಕಣ್ಣಿನ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಜ.5ರಂದು ನಡೆಯಲಿದೆ.
ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಅನುಗ್ರಹ ವಿಷನ್ ಫೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಸಹಯೋಗದಲ್ಲಿ ಮುಂಜಾನೆ 10ಘಂಟೆಗೆ ಮೂಕಿಹಾಳ ಗ್ರಾಮದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ, ಖ್ಯಾತ ನೇತ್ಯ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಇವರು ಕಣ್ಣಿನ ರೋಗಿಗಳ ತಪಾಸಣೆ ನಡೆಸಿ ಅಗತ್ಯ ಓಷಧೋಪಚಾರ ಮಾಡುವರು ಹಾಗೂ ಶಸ್ತ್ರ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ವಿಜಯಪುರದ ತಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸುವರು. ಈ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕೆಂದು ಹಜರತ್ ಲಾಡ್ಲೆ ಮಶ್ಯಾಕ್ ಉರುಸು ಕಮೀಟಿ ಪ್ರಕಟಣೆ ತಿಳಿಸಿದೆ.