ವಿಜಯಪುರ 19: ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತಿ ಚಟುಚಟಿಕೆಯ(ಂಆಊಆ) ಕಾಯಿಲೆಗೆ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ಶಿಬಿರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏ. 21 ರಿಂದ ಏ. 26ರ ವರೆಗೆ ನಡೆಯಲಿದೆ.
ಆಸ್ಪತ್ರೆಯ ಕೌಮಾರ ಭೃತ್ಯ ವಿಭಾಗದಿಂದ ಆರು ದಿನಗಳ ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಮಕ್ಕಳು ಒಂದೇ ಜಾಗದಲ್ಲಿ ಕುಳಿತು ಕೊಳ್ಳದಿರುವುದು, ಹೋಂ ವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಸೇರಿದಂತೆ ಕೆಲಸಗಳನ್ನು ಮಾಡಲು ಹಿಂಜರಿಯುವುದು, ದೈನಂದಿನ ಚಟುವಟಿಕೆಗಳಲ್ಲಿ ಬಲು ಬೇಗನೆ ಬೇಸರಗೊಳ್ಳುವುದು, ಅಭ್ಯಾಸದಲ್ಲಿ ಏಕಾಗ್ರತೆ ಕೊರತೆ ಮುಂತಾದ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ನಡೆಯಲಿದೆ.
ಪಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಮೊ. ನಂ. 8197378138 ಗೆ ಸಂಪರ್ಕಿಸಬಹುದಾಗಿದೆ.