ಬೆಂಗಳೂರು, ಫೆ.13, ದೇಶದ ಪ್ರಮುಖ ರೈಲ್ ಟಿಕೆಟ್ ಬುಕಿಂಗ್ ವೇದಿಕೆಯಾದ ಕನ್ಫರ್ಮ್ ಟಿಕೆಟಿ ಸಂಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಉಚಿತ ರೈಲ್ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಈ ಉದ್ದೇಶಕ್ಕಾಗಿ ಸಂಸ್ಥೆಯು ‘ಫ್ರೀ ಕ್ಯಾನ್ಸಲೇಷನ್ ಪ್ರೊಟೆಕ್ಷನ್’ ವೈಶಿಷ್ಟ್ಯವನ್ನು ತನ್ನ ವೇದಿಕೆಯಲ್ಲಿ ಪರಿಚಯಿಸಿದೆ.ಗ್ರಾಹಕರು ಈ ವೇದಿಕೆ ಮೂಲಕ ರೈಲು ಹೊರಡುವ 4 ಗಂಟೆಗಳ ಮೊದಲು ಅಥವಾ ರೈಲ್ ಚಾರ್ಟ್ ತಯಾರಿಸುವ ಮೊದಲು ತಮ್ಮ ರೈಲು ಟಿಕೆಟ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕ ನೀಡದೆ ರದ್ದು ಮಾಡಬಹುದು. ಈ ಸೌಲಭ್ಯವನ್ನು ತತ್ಕಾಲ್ ಟಿಕೆಟ್ ಗಳಿಗೆ ಕೂಡ ನೀಡಲಾಗಿದ್ದು ಗ್ರಾಹಕರು ಟಿಕೆಟ್ ನ ಸಂಪೂರ್ಣ ಹಣವನ್ನು ಪಡೆದುಕೊಳ್ಳಬಹುದು. “ಕಾರಣಾಂತರಗಳಿಂದ ನಾವು ರೈಲ್ ಟಿಕೆಟ್ ಗಳನ್ನು ಕ್ಯಾನ್ಸಲ್ ಮಾಡುವ ಅನಿರ್ವಾಯತೆಗೆ ಒಳಗಾಗುತ್ತೇವೆ. ಇದರಿಂದ ಗ್ರಾಹಕರು ದೊಡ್ಡ ಮಟ್ಟದ ಶುಲ್ಕವನ್ನು ನೀಡಬೇಕಾಗುತ್ತದೆ. ಫ್ರೀ ಕ್ಯಾನ್ಸಲೆಷನ್ ಪ್ರೊಟಕ್ಷನ್ ವೈಶಿಷ್ಟ್ಯದಿಂದಾಗಿ ನಾವು ಯಾವುದೇ ಕ್ಯಾನ್ಸಲೇಷನ್ ಶುಲ್ಕವನ್ನು ಗ್ರಾಹಕರಿಗೆ ಹೇರುವುದಿಲ್ಲ” ಎಂದು ಕನ್ಫರ್ಮ್ ಟಿಕೆಟ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ದಿನೇಶ್ ಕುಮಾರ್ ಕೋಥ ತಿಳಿಸಿದ್ದಾರೆ.