ಉಚಿತ ಸಾಮೂಹಿಕ ವಿವಾಹ

ಬಳ್ಳಾರಿ : ಕನ್ನಡ ರಕ್ಷಣಾ ಯುವ ವೇದಿಕೆ ಜಿಲ್ಲಾಧ್ಯಕ್ಷರು ಕಪ್ಪಗಲ್ಲು ಸಿ.ಮುನ್ನಿಸ್ವಾಮಿ ಇವರು ನೇತೃತ್ವದಲ್ಲಿ 15ನೇ ವರ್ಷದ ಉಚಿತ ಸಾಮೂಹಿಕ ವಿವಾಹಗಳು ಜರುಗಲಿದೆ. 

ಬಳ್ಳಾರಿ ತಾಲೂಕು, ಕಪ್ಪಗಲ್ಲು ಸಿರಿವಾರ ರಸ್ತೆಯಲ್ಲಿರುವ ಅಮರೇಶ್ವರ ದೇವಸ್ಥಾನದಲ್ಲಿ ಮೇ 7, 8 ನೇ ತಾರೀಖು ಭಾನುವಾರ ಬೆಳಿಗಿನ ಜಾವ ಬ್ರಮಿಣಿ ಮೂರ್ಹತದಲ್ಲಿ 5.00 ಗಂಟೆ ಯಿಂದ 6.00 ಗಂಟೆಯ ವರೆಗೆ ಸಲ್ಲುವ ಶುಭ ಮೂಹೂರ್ತದಲ್ಲಿ ಮಾಂಗಲ್ಯಧಾರಣೆ ಕಾರ್ಯಕ್ರಮ ಇರುತ್ತದೆ ಎಂದು ಕನ್ನಡ ರಕ್ಷಣಾ ಯುವ ವೇದಿಕೆ ಜಿಲ್ಲಾಧ್ಯಕ್ಷರು ಕಪ್ಪಗಲ್ಲು ಸಿ.ಮುನ್ನಿಸ್ವಾಮಿ ಇವರು ತಿಳಿಸಿದರು. ಸುಮಾರು 15 ಜೋಡಿಗಳಿಗೆ ಉಚಿತ ವಿವಾಹಗಳನ್ನು ಮಾಡಲಾಗುವುದೆಂದು ಹೇಳಿದರು. ಶನಿವಾರ ಸಂಜೆ  ಹಿಂದೂ ಸಂಪ್ರಾದಯ ಪ್ರಕಾರ ತಂಭುಲ, ಅನ್ನದಾನ ಕಾರ್ಯಕ್ರಮಗಳನ್ನು ನೇರವೇರಿಸಿ ಬೆಳಿಗ್ಗೆ ವಿವಾಹದ ಕಾರ್ಯಕ್ರಮ ಮತ್ತು ಎಲ್ಲಾರಿಗೂ ಅನ್ನದಾನ ಕಾರ್ಯಕ್ರಮವನ್ನು ಏರಿ​‍್ಡಸಲಾಗಿರುತ್ತದೆ.  ಈ ಒಂದು ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಕುಲ-ಮತ ಬೇದವಿಲ್ಲದ ಈ ಕಾರ್ಯಕ್ರಮಕ್ಕೆ ಆಗಮೀಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.