ಧಾರವಾಡ 10: ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ ಆಸ್ಪತ್ರೆಯು ಈ ಭಾರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಇದೆ ದಿ. 12 ಬುಧವಾರ ದಂದು ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರವನ್ನು ಮತ್ತು ವೆರಿಕೋಸ್ ವೇನ್ಸಗೆ ಸಂಬಂದಿಸಿದಂತೆ ಆರೋಗ್ಯ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಹಳಿಯಾಳ ರಸ್ತೆಯಲ್ಲಿರುವ ಪರಿಸರ ಭವನದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ಬೆಳಿಗ್ಗೆ 09 ಗಂಟೆಯಿಂದ ಮದ್ಯಾಹ್ನ 02 ಗಂಟೆಯವರೆಗೆ ನಡೆಯಲಿದ್ದು, ಬಿ ಪಿ, ಶುಗರ್, ಇಸಿಜಿ, ಈಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆಯನ್ನು ಉಚಿತವಾಗಿ ಮಾಡಲಾಗುತ್ತದೆ ಹಾಗೂ ವೆರಿಕೋಸ್ ವೇನ್ಸಗೆ ಸಂಬಂದಿಸಿದಂತೆ ಆರೋಗ್ಯ ಉಪನ್ಯಾಸವನ್ನು ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯ ಪ್ರಖ್ಯಾತ ವ್ಯಾಸಕ್ಯೂಲರ್ ಶಸ್ತ್ರ ಚಿಕಿತ್ಸಕರಾದ ಡಾ. ಬಸವರಾಜೇಂದ್ರ ಅನುರಶೆಟ್ರು ರವರು ನೀಡುವರು. ಈ ಕಾರ್ಯಕ್ರಮವು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಹಬ್ಬಳ್ಳಿ - ಧಾರವಾಡ ನಾಗರಿಕರ ಪರಿಸರ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆಯುವದು ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9900776177 ಸಂಖ್ಯೆಗೆ ಸಂಪರ್ಕಿಬಹುದು.