ಲೋಕದರ್ಶನ ವರದಿ
ಚಿಕ್ಕೋಡಿ 03: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಣಕಾಸು ಸಚಿವರು ಸರ್ವರಿಗೂ ಅನುಕೂಲವಾಗುವ ಹಾಗೇ ಬಜೆಟ್ ಮಂಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಯೋಜನೆಗಳು ಜಾರಿಯಾಗುತ್ತವೆ ಎಂದು ಶಾಸಕ ದುಯರ್ೋಧನ ಐಹೋಳೆ ಹೇಳಿದರು.
ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಕುಂಗಟೋಳಿ, ಬೆಣ್ಣಿಹಳ್ಳಿ, ಡೋಣವಾಡ ಮತ್ತು ಕಬ್ಬೂರ ಪಟ್ಟಣದಲ್ಲಿ ಶನಿವಾರ ಫಲಾನುಭವಿಗಳಿಗೆ ಉಚಿತ ಗ್ಯಾಸ ವಿತರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು 60 ವರ್ಷ ದೇಶವನ್ನಾಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೇ ಒಮ್ಮೆಯು ಜನಪರ ಬಜೆಟ್ ಮಂಡನೆ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯಥರ್ಿ ಗೆಲುವು ಸಾಧಿಸಿದ್ದರೆ ಇಂದು ರಾಯಬಾಗ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಹಳ್ಳಿಗಳು ನೀರಾವರಿ ಸೌಲಭ್ಯ ಹೊಂದುತ್ತಿದ್ದವು. ಆದರೆ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಗೆಲುವಿನಿಂದ ನಮ್ಮ ಕ್ಷೇತ್ರಕ್ಕೆ ಬಾರಿ ಅನ್ಯಾಯವಾಗಿದೆಂದು ಅಳಲು ವ್ಯಕ್ತಪಡಿಸಿದರು. ನಾಗರಮುನ್ನೋಳ್ಳಿ ಮತ್ತು ಕರೋಶಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ತಂದು ಕೊಡುತ್ತೇನೆಂದು ಸುಳ್ಳು ಹೇಳಿ ವೋಟು ಪಡೆದುಕೊಂಡ ಸಂಸದ ಪ್ರಕಾಶ ಹುಕ್ಕೇರಿ ಮರಳಿ ಇತ್ತ ಕಡೆ ತಿರುಗಿ ನೋಡಿಲ್ಲ, ಈ ಭಾಗದ ಜನರ ಪರಿಸ್ಥಿತಿ ಏನಿದೆ ಎಂಬುದು ಕೇಳದೆ ಇರುವುದು ದುರದೃಷ್ಟಕರವಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಪವನ ಕತ್ತಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಪ್ರಧಾನಿ ಮೋದಿ ಋಣ ತೀರಿಸಲು ಅವರ ಕೈ ಬಲ ಪಡಿಸಿಲು ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯಥರ್ಿಯನ್ನು ಬೆಂಬಲಿಸಬೇಕು ಎಂದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಮಹೇಶ ಭಾತೆ, ಸುರೇಶ ಬೆಲ್ಲದ, ವಿಜಯ ಕೊಠಿವಾಲೆ, ನಿಂಗಪ್ಪ ಕುರುಬರ, ಸಂತೋಷ ಕಮತೆ, ದುಂಡಪ್ಪ ಬೆಂಡವಾಡೆ, ಸಿದ್ದಗೌಡ ಪಾಟೀಲ ಮುಂತಾದವರು ಇದ್ದರು.