ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 18: ದೇಶದಲ್ಲಿ ಶೇಕಡಾ 5 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ನಿಂದ ಮರಣವನ್ನಪುತ್ತಿರುವದು ನಿಜಕ್ಕೂ ಖೇದಕರ ಸಂಗತಿಯಾಗಿದೆ ಎಂದು ಸ್ವಶಕ್ತ ಎಂಪವರಮೆಂಟ್ ಸೆಲ್ ಫಾರ ವುಮೆನನ ಮುಖ್ಯ ಸಂಯೋಜನಾಧಿಕಾರಿ ಡಾ. ಪ್ರೀತಿ ದೊಡವಾಡ ಮಾತನಾಡಿದರು. 

ಇಂದು ನಗರದ ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಸ್ವಶಕ್ತ ಎಂಪವರಮೆಂಟ್ ಸೆಲ್ ಫಾರ ವುಮೆನ್ ಹಾಗೂ ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ "ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ"ದ ಅಂಗವಾಗಿ ಮಾತನಾಡಿದರು. ಸ್ತನ ಕ್ಯಾನ್ಸರ ಬಗ್ಗೆ  ಭಯಪಡದೇ ಮುನ್ನೆಚ್ಚರಿಕೆಯ ಕ್ರಮಗಳಾಗಿ ಸ್ವಯಂ ತಪಾಸಣೆ, ಇದರಿಂದ ಸಮಾಧಾನವಾಗದಿದ್ದರೆ ನುರಿತ ಶಸ್ತ್ರಚಿಕಿತ್ಸಾ ವೈದ್ಯರು ಗಳಿಂದ ತಪಾಸಣೆ ಹಾಗೂ ವೈದ್ಯಕೀಯ ಪರೀಕ್ಷೆೆಯಾದ ಮ್ಯಾಮೊಗ್ರಾಪಿ ಮಾಡಿಸಿಕೊಳ್ಳುವದರಿಂದ ತಿಳಿದುಕೊಳ್ಳಬಹುದಾಗಿದೆ ಎಂದು  ತಿಳುವಳಿಕೆ ನೀಡಿದರು.   

  ಇದೇ ಸಂದರ್ಭದಲ್ಲಿ ಡಾ. ಎಸ್.ಸಿ.ಧಾರವಾಡ ಮಾತನಾಡುತ್ತ ಸ್ತನ ಕ್ಯಾನ್ಸರ ಒಂದು  ಮಾರಕ ರೋಗವಾಗಿದ್ದು ಇದಕ್ಕೆ ಹೆದರದೇ ಕಾಲಕಾಲಕ್ಕೆ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯವಾಗಿರಬಹುದು. ಅದಕ್ಕೆ ಸಂಭಂದಿಸಿದ ತೊಂದರೆಗಳು ಕಾಣಿಸಿಕೊಳ್ಳುವುದು ಸವರ್ೇಸಾಮಾನ್ಯವಾಗಿದೆ. ಆದರೆ ಇದಕ್ಕೆ ಹೆದರದೇ ಅಗತ್ಯ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ಪಡೆದುಕೊಂಡರೆ ಮಹಿಳೆಯರು ಈ ರೋಗದಿಂದ ಮುಕ್ತಿ ಹೊಂದಬಹುದಾಗಿದೆ. ಅಲ್ಲದೆ ನಿಯಮಿತ ವೈದ್ಯರ ತಪಾಸಣೆಯಿಂದ ರೋಗಮುಕ್ತ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಅರಿವು ನೀಡಿದರು. 

ಈ ಸಂದರ್ಭದಲ್ಲಿ ಡಾ. ರೇಣುಕಾ ಮೆಟಗುಡ್, ಡಾ. ಹರಪ್ರೀತ ಕೌರ್, ಡಾ. ಮೀನಾಕ್ಷಿ ಮಾಸ್ತೆ, ಡಾ. ಸ್ನೇಹಲ, ಡಾ. ಶಿಲ್ಪಾ ಮೆಳೇದ, ಉಪನ್ಯಾಸಕರಾದ ಸುಧಾ, ಶಾ ಭಟ್,  ಬಬಿತಾ, ಶ್ರೀಮತಿ ಜೆನಿಟಾ, ನಿರ್ಮಲಾ ಡಿಸೋಜಾ, ಶ್ವೇತಾ ಅಂಗಡಿ ಹಾಗೂ ಉಮಾ ಕೋಳೆ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ವೈಕೀಯೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸುಮಾರು 250 ಕ್ಕೂ ಅಧಿಕ ಆಸ್ಪತ್ರೆಯ ಸಿಬ್ಬಂದಿಗೆ ಸ್ತನ ಕ್ಯಾನ್ಸರನ ತಪಾಸಣೆ ಮಾಡಲಾಯಿತು.