ಬೆಂಗಳೂರು, ಫೆ 3, ಕೆನಡಾ ಮೂಲದ ಕಂಪನಿಯಿಂದ ತಮಗೆ 42 ಲಕ್ಷ ರೂ ವಂಚನೆಯಾಗಿದೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಉದ್ಯಮಿ ಮಲ್ಲೇಶ್ ಲಿಂಗಾಚಾರ್ ಎಂಬುವವರು ಐವರ ವಿರುದ್ಧ ದೂರು ನೀಡಿದ್ದಾರೆ. ಕೆನಡಾ ಮೂಲದ ಕಂಪನಿ ಮುಖ್ಯಸ್ಥ ಅಲೆಕ್ಸ್ ವುಲ್ಫ್, ಜೇಮ್ಸ್ ಗೋಲ್ಡ್ ಬನ್ ಹಾಗೂ ಭಾರತ ಮೂಲದ ಕವಿತಾ ಠಾಕೂರ್, ಪದ್ಮನಾಭನ್, ಕರುಣಾ ಐವರು ತಮಗೆ ವಂಚನೆ ಮಾಡಿದ್ದಾರೆ ಎಂದು ಮಲ್ಲೇಶ್ ಅವರು ಆರೋಪಿಸಿದ್ದಾರೆ. ಕೆನಡಾದ ಕ್ಯಾನ್ಸರ್ ಸಂಶೋಧನಾ ಕೇಂದ್ರವೊಂದಕ್ಕೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದೆ. ಆದರೆ, ಹಣ ಪಾವತಿ ಸಂದರ್ಭದಲ್ಲಿ ತಮಗೆ 42 ಲಕ್ಷ ರೂ ವಂಚಿಸಲಾಗಿದೆ ಎಂದು ಮಲ್ಲೇಶ್ ಅವರು ದೂರಿದ್ದಾರೆ. ಸದ್ಯ ಪೊಲೀಸರು ಉದ್ಯಮಿ ಮಲ್ಲೇಶ್ ಅವರ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.