ಫೆ. 28ರಿಂದ ಮೂರು ದಿನಗಳ ಚಿಕ್ಕಮಂಗಳೂರು ಹಬ್ಬ- ಜಿಲ್ಲಾ ಉತ್ಸವ ಆರಂಭ

ಚಿಕ್ಕಮಗಳೂರು, ಫೆ 4, ಚಿಕ್ಕಮಗಳೂರು  ಜಿಲ್ಲೆಯಲ್ಲಿ  ಪ್ರವಾಸೋದ್ಯಮವನ್ನು ಮತ್ತಷ್ಟು   ವೃದ್ದಿಸುವ ಕ್ರಮವಾಗಿ  ಜಿಲ್ಲಾಡಳಿತ  ಇದೇ ಫೆಬ್ರವರಿ 28 ರಿಂದ ಮೂರು ದಿನಗಳ  ಚಿಕ್ಕಮಂಗಳೂರು ಹಬ್ಬ - ಜಿಲ್ಲಾ ಉತ್ಸವವನ್ನು ಆಯೋಜಿಸಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  ಉತ್ಸವ ಆಯೋಜಿಸಲಾಗಿದ್ದು,   ಸುಭಾಷ್ ಚಂದ್ರ ಬೋಸ್  ಕ್ರೀಡಾಂಗಣ ಹಾಗೂ  ಕುವೆಂಪು ಕಲಾ ಮಂದಿರದಲ್ಲಿ ಉತ್ಸವದ ಅಂಗವಾಗಿ  ಹಲವು  ಸಾಂಸ್ಕೃತಿಕ   ಕಾರ್ಯಕ್ರಮಗಳು ನಡೆಯಲಿವೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ   ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ   ಸೋಮವಾರ  ಸಂಜೆ   ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ    ಚಿಕ್ಕಮಂಗಳೂರು  ಜಿಲ್ಲಾ  ಹಬ್ಬ  ಹಾಗೂ ಉತ್ಸವ  ಕಾರ್ಯಕ್ರಮದ  ಲೊಗೋ  ಅನಾವರಣಗೊಳಿಸಿದರು.ಈ ಸಂಸರ್ಭದಲ್ಲಿ ಮಾತನಾಡಿದ  ಸಚಿವ ಸಿ.ಟಿ.  ರವಿ,    ಉತ್ಸವವನ್ನು  ಸುಸೂತ್ರವಾಗಿ    ನಡೆಸಲು  ಸಾಧ್ಯವಾಗುವಂತೆ   ಜಿಲ್ಲಾಡಳಿತ  15 ಉಪ ಸಮಿತಿಗಳನ್ನು  ರಚಿಸಿದೆ.  ರಂಗ ಉತ್ಸವ,  ಚಲನ ಚಿತ್ರೋತ್ಸವ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು  ಹಾಗೂ  ಜನಪದ ಕಲಾ ಪ್ರದರ್ಶನಗಳನ್ನು  ಆಯೋಜಿಸಲಾಗುತ್ತಿದೆ  ಎಂದು ವಿವರಿಸಿದರು. ಉತ್ಸವದ ಭಾಗವಾಗಿ  ನಡೆಯಲಿರುವ  ಮೆರವಣಿಗೆಯಲ್ಲಿ   ರಾಜ್ಯಾದ್ಯಂತ  600 ಕಲಾವಿದರು ಪಾಲ್ಗೊಳ್ಳಲಿದ್ದಾರೆ. 20 ಇಲಾಖೆಗಳು  ತಮ್ಮ ಜನಪರ ಯೋಜನೆಗಳ ಬಗ್ಗೆ   ಜನರಿಗೆ  ಮಾಹಿತಿ, ಜಾಗೃತಿ ಮೂಡಿಸುವ   ಮಳಿಗೆಗಳನ್ನು   ಉತ್ಸವದಲ್ಲಿ   ಸ್ಥಾಪಿಸಲಿವೆ ಎಂದರು.