ನಾಲ್ಕನೇ ಸಲದ ಕನ್ನಡ ಜಾತ್ರೆ: ಕನ್ನಡದ ಬಳಕೆ ಎಲ್ಲರೂ ಹೆಚ್ಚು ಮಾಡಬೇಕು- ಕೆ.ಜಿ ನಾಗರಾಜ್

Fourth Kannada fair: Everyone should use Kannada more - KG Nagaraj

ಬಳ್ಳಾರಿ 02: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಕನ್ನಡ ನಾಡು ನುಡಿಯ ಅಭಿಮಾನವನ್ನು ಹೆಚ್ಚಿಸುವ ಗುರಿಯನ್ನಿಟ್ಟುಕೊಂಡು ನಾಲ್ಕನೇ ಸಲ ಕನ್ನಡ ಜಾತ್ರೆ ಶೀರ್ಷಿಕೆಯಲ್ಲಿ ಮಕ್ಕಳಿಗಾಗಿ ಕನ್ನಡದ ವಿವಿಧ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಆಯೋಜನೆ ಮಾಡಿದ್ದರು. ಬೆಳಗಿನ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅತಿಥಿಗಳಾದ ಎಂ ಶಿವಾಜಿರಾವ್ ಜಿಲ್ಲಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಬಳ್ಳಾರಿ, ಶಶಿಧರ ಮೇಟಿ ಮುಖ್ಯಸ್ಥರು ವಿಸ್ತಾರ ಟಿವಿ ಬಳ್ಳಾರಿ, ಸಿದ್ದರಾಮಗೌಡ ಲೆಕ್ಕಪರಿಶೋಧಕರು ಬಳ್ಳಾರಿ ಎ ಮಹ್ಮಮದ್ ರಫೀಕ್ ಚಿತ್ರಕಲಾವಿದರು ಬಳ್ಳಾರಿ, ಶಿವಯೋಗಪ್ಪ ಮತ್ತಿಕಟ್ಟಿ ಪ್ರಾಧ್ಯಪಕರು, ಸ.ಕಿ.ತಾ.ಶಾಲೆ ಬಳ್ಳಾರಿ , ಎನ್ ಬಸವರಾಜ್ ನಿವೃತ್ತ ಶಿಕ್ಷಕರು, ಮರಿಸ್ವಾಮಿ ರೆಡ್ಡಿ ಜಿಲ್ಲಾಧ್ಯಕ್ಷರು ಅನುದಾರಹಿತ ಶಾಲೆಗಳ ಒಕ್ಕೂಟ ಬಳ್ಳಾರಿ,  ಕಟ್ಟೆಸ್ವಾಮಿ, ಕರಾಟೆ ತರಬೇತುದಾರರು ಅಡವಿ ಸ್ವಾಮಿ ಮುಖಂಡರು ಬಳ್ಳಾರಿ ಮಾಡಿದರು. ಕನ್ನಡ ಹಿರಿಮೆ ಕುರಿತು ವೀರೇಂದ್ರ ರಾವಿಹಾಳ್ ಬರಹಗಾರರು ಬಳ್ಳಾರಿ ಮಾತಾಡಿದರು.  ಈ ಸಂಧರ್ಭದಲ್ಲಿ ಗೋಡೆ ಶಿವರಾಜ್ ಬರೆದ ದೊಡ್ಡಬಸವಗವಾಯಿಗಳು ರಾಗ ಸಂಯೋಜನೆ ಮಾಡಿದ ಸಂಸ್ಥೆಯ ಕೆಲಸಗಳ ಗೀತೆಯನ್ನು ಬಿಡುಗಡೆ ಮಾಡಿ ಕನ್ನಡದ ಸ್ಪರ್ಧೇಗಳಿಗೆ ಚಲಾನೆ ನೀಡಿದರು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.  ಅಧ್ಯಕ್ಷತೆ ವಹಿಸಿದ ಕೆ.ಜಿ ನಾಗರಾಜ್ ಪ್ರಾಂಶುಪಾಲರು ಸ.ಕಿ.ತಾ ಶಾಲೆ ಬಳ್ಳಾರಿ ಮಾತಾಡಿ ಕನ್ನಡದ ಬಳಕೆಯನ್ನು ನಾವೆಲ್ಲಾ ಹೆಚ್ಚು ಮಾಡಬೇಕು ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಎಲ್ಲಾರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. 

ಸಂಜೆಯ ಸಾಂಸ್ಕೃತಿಕ ಮತ್ತು ಬಹುಮಾನ ವಿತರಣೆ ಕಾಯಕ್ರಮದಲ್ಲಿ ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ಪದ್ಮ  ಡಾ ಮಾತಾ ಬಿ ಮಂಜಮ್ಮ ಜೋಗತಿ ಸ್ವೀಕರಿಸಿ ಮಕ್ಕಳಲ್ಲಿ ಕನ್ನಡ ಅಭಿಮಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಕೆಲಸ ಸಿಗುವಂತಾಗಬೇಕು, ಲಿಂಗ ಬೇದ ಮಾಡದೇ ಎಲ್ಲಾರನ್ನು ಸಮನಾಗಿ ಕಾಣಬೇಕು, ತೃತಿಯ ಲಿಂಗಿಯ ವ್ಯಕ್ತಿಗಳನ್ನು ಗೌರವಿಸಬೇಕು ಎಂದರು,  ಸಂಸ್ಥೆಯ ಸಮಾಜಮುಖಿ ಕೆಲಸಗಳು ನಿರಂತರವಾಗಿ ಇರಲಿ, ಇಂತಹ ಸಂಸ್ಥೆಗೆ ನಮ್ಮೆಲ್ಲರ ಬೆಂಬಲವಿರಬೇಕು ಎಂದು ತಿಳಿಸಿದರು ಹಾಗೂ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯನ್ನು ಜಿಲಾನಿ ಭಾಷ ನೃತ್ಯ ಗುರುಗಳು ಬಳ್ಳಾರಿ ಸ್ವೀಕರಿಸಿ ಮಕ್ಕಳು ಚಿಕ್ಕಂದಿನಿಂದಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಕಲಾ ಸೇವೆ ಮಾಡುತ್ತಿರುವ ಎಲ್ಲರನ್ನ ಗೌರವಿಸಬೇಕು ಹಾಗು  ಸಂಸ್ಥೆಯವರ ಈ ಆತ್ಮೀಯ ಸನ್ಮಾನವು ನಮಗೆ ಖುಷಿತಂದಿದೆ ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿನಯ್ ಕುಮಾರ್ ರವರು ಮಾತಾಡಿ ನೀರೀಕ್ಷೆಗೂ ಮೀರಿ ಜನ ಸೇರಿದ್ದು ನಮಗೆ ಖುಷಿತಂದಿದೆ. ನಮ್ಮ ಕನ್ನಡ ಪರ ಮತ್ತು ಸಮಾಜಮುಖಿ ಕೆಲಸಗಳು ನಿರಂತರವಾಗಿ ಇರುತ್ತವೆ ಎಂದು ತಿಳಿಸಿದರು. ಬಹುಮಾನ ವಿತರಣೆಯನ್ನು ಅತಿಥಿಗಳಾದ ಪೋಲಾ ಪ್ರವೀಣ್ ಉದ್ಯಮಿಗಳು ಬಳ್ಳಾರಿ ಜಿ.ವಿ.ಮಂಜುನಾಥ ಜಿಲ್ಲಾಧ್ಯಕ್ಷರು ಕರ್ನಾಟಕ ಎಸ್‌ಡಿಎಂಸಿ ಸಮನ್ವಯ ವೇದಿಕೆ ಬಳ್ಳಾರಿ, ನಿಷ್ಠಿ ರುದ್ರ​‍್ಪ ಜಿಲ್ಲಾಧ್ಯಕ್ಷರು ಕಸಾಪ ಬಳ್ಳಾರಿ ಕೆ ಎಂ ಶಿವಶಂಕರಯ್ಯ ಸಮಾಜ ಸೇವರಕು ಬಳ್ಳಾರಿ ದ್ರಾಕ್ಷಾಯನಿ ವೈದ್ಯರು ಬಳ್ಳಾರಿ, ಮಂಜುನಾಥ ಹಿಂದೂಪುರ ವಕೀಲರು ಬಳ್ಳಾರಿ ಮಾಡಿದರು ಹಾಗೂ ಗೋವಿಂದರಾಜಲು, ಸದಸ್ಯರು ಮಹಾನಗರ ಪಾಲಿಕೆ ಬಳ್ಳಾರಿ, ರಾಜಶೇಖರ್ ಜಿಲ್ಲಾಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ ಬಳ್ಳಾರಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಕೊಂಡ ಅಮ್ಮ ಟ್ರಸ್ಟ್‌ ಬಳ್ಳಾರಿ ಮತ್ತು ಹೆಚ್ ರಾಘವೇಂದ್ರ ಗುಪ್ತ ಬಳ್ಳಾರಿ ಹಾಗೂ ವಿಶೇಷ ಆಹ್ವಾನಿತರಾದ ಬಳ್ಳಾರಿಯಲ್ಲಿ ಚಿತ್ರಿಕರಣಗೊಂಡ ಅಮರ ಪ್ರೇಮಿ ಅರುಣ್ ಚಿತ್ರದ ನಿರ್ದೇಶಕ ಬರಹಗಾರ ಪ್ರವೀಣ್ ಕುಮಾರ್ ಜಿ ಸನ್ಮಾನಿಸಲಾಯಿತು. ನಿರೂಪಣೆಯನ್ನು ?ಂಧ್ಯಾ ಮತ್ತು  ಮಂಜುನಾಥ್ ಎಸ್ ಕೋಟಿ,  ದಕ್ಷಿಣ ಮೂರ್ತಿ.ಎಂ ಮಾಡಿದರು  ಹಾಗೂ ಸಿದ್ದಲಿಂಗಯ್ಯ ನಿವೃತ್ತ ಶಿಕ್ಷಕರು, ಉಮೇಶ್ ಸುಭಾಶ್ ಚಂದ್ರ ಉಷಾ ನರೇಂದ್ರಬಾಬು ಅನ್ನಪೂರ್ಣ ಅಶ್ವಿನಿ ಕು.ಶಾಂತಾಕುಮಾರಿ ಪ್ರದೀಪ್ ಕುಮಾರ್ ಜಿ ವೆಂಕಟೇಶ್ ವಿಶಾಲಾಕ್ಷಿ ಶಶಿಕಲಾ ಶ್ರೀ ಆನಂದ್ ಯೋಗಿ  ಸ್ಪರ್ದೇಗಳ ತೀರ​‍್ೂಗಾರರಾಗಿದ್ದರು.  

ಸಂಸ್ಥೆಯ ಕಾರ್ಯದರ್ಶಿ ಮಾರುತಿ , ಸಹಕಾರ್ಯದರ್ಶಿ ಮೆಹಬೂಬ್ ಭಾಷ, ರವಿ ವರ್ಮ, ಸಂದೀಪ್ ಕುಮಾರ್ ಹಾಗೂ ಸದಸ್ಯರಾದ  ಮಂಜುಳ, ಭಾರತಿ, ಜೋಸ್ನಾ ಕಾಕಿ, ಅಕ್ಷತಾ, , ಅಜಿತ್, ಸೂರಜ್ ಹರೀಶ್ ರೆಡ್ಡಿ, ವೀರೇಶ್,  ಬಾಲಸುಬ್ರಮಣ್ಯಂ,ಅನಿಲ್ ಕೇದಾರ್, ವೆಂಕಟೇಶ್, ರಾಜು ಕೆ ಹೆಚ್, ಹರ್ಷವರ್ಧನ್, ಹಸೇನ್, ಚಿರಂಜೀವಿ, ರವರು ಪಾಲ್ಗೋಂಡಿದ್ದರು.