ಭುವನೇಶ್ವರ, ಏ 6 ಪಶ್ಚಿಮ ಒಡಿಶಾದ ಬರಾಗಾರ್ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಕಾಡಾನೆ ದಾಳಿಗೆ ನಾಲ್ವರು ಮೃತಪಟ್ಟಿರುವುದು ವರದಿಯಾಗಿದೆ.ಇದರಲ್ಲಿ ಒಂದೇ ಕುಟುಂಬದ ಮೂರು ಹತರಾಗಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ 75 ವರ್ಷದ ವೃದ್ಧನ ಮೇಲೆ ದಾಳಿ ನಡೆಸಿದ ಆನೆ, ನಂತರ ಅವರ ಪುತ್ರ ಹಾಗೂ ಮೊಮ್ಮಗನ ಮೇಲೆ ದಾಳಿ ನಡೆಸಿದೆ.ನಂತರ ಬೆಳಗ್ಗೆ ಹೂವು ಸಂಗ್ರಹಿಸುತ್ತಿದ್ದ 52 ವರ್ಷದ ವ್ಯಕ್ತಿಯ ಮೇಲೂ ಆನೆ ದಾಳಿ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾರ, ಕಾಡಾನೆ ಆಹಾರ ಅರಸಿ ನಾಡಿಗೆ ಬಂದಿರುವ ಸಾಧ್ಯತೆಯಿದೆ. ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಮೃತರಿಗೆ ಪರಿಹಾರದ ಬೇಡಿಕೆಯಿಟ್ಟಿದ್ದಾರೆ.