ನವದೆಹಲಿ, ಜೂನ್ 28: ಸರ್ಬಿಯಾ ಮತ್ತು ಮಾಂಟೆನೆಗ್ರೊದ ಫುಟ್ಬಾಲ್ ತಂಡದಮಾಜಿ ಮುಖ್ಯ ಕೋಚ್ ಇಲಿಜಾ ಪೆಟ್ಕೊವಿಕ್ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಶಂಕಿಸಲಾಗಿದೆ.ಶಾಂಘೈ ಶೆನ್ಹುವಾ ಕ್ಲಬ್ ಸರ್ಬಿಯಾದ ಫುಟ್ಬಾಲ್ ತರಬೇತುದಾರನ ಸಾವನ್ನು ಭಾನುವಾರ ದೃಢಪಡಿಸಿದೆ. "ನೀವು ನಮಗೆ ನೀಡಿದ ಆ ಅದ್ಭುತ ಸಂಗತಿಗಳನ್ನು ನಾವು ತುಂಬಾ ಇಷ್ಟಪಡುತ್ತೇವೆ" ಎಂದು ಕ್ಲಬ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ.
ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು ಎಂದು ಸುದ್ದಿವಾಹಿನಿ ವರದಿ ಮಾಡಿತ್ತು. ಜ್ವರ ಮತ್ತು ಡ್ಯುವೋಡೆನಮ್ ಹುಣ್ಣುಗಾಗಿ ಪೆಟ್ಕೊವಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಆಸ್ಪತ್ರೆಯಲ್ಲಿ COVID-19 ಗೆ ತುತ್ತಾಗಿರುವುದು ಕಂಡುಬಂದಿದೆ ಎಂದು ಸುದ್ದಿವಾಹಿನಿಯ ನೆಟೀಸ್ ವರದಿ ತಿಳಿಸಿದೆ.2006 ರ ವಿಶ್ವಕಪ್ ಫೈನಲ್‌ನಲ್ಲಿ ಪೆಟ್ಕೊವಿಕ್ ಸೆರ್ಬಿಯಾ ಮತ್ತು ಮಾಂಟೆನೆಗ್ರೊ ತರಬೇತುದಾರರಾಗಿದ್ದರು. ಈ ಅವಧಿಯಲ್ಲಿ ತಂಡವು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಗಿತ್ತು.