ಇಂಫಾಲ, ಏ 5, ಮಣಿಪುರದ ಮಾಜಿ ಮುಖ್ಯಮಂತ್ರಿ ಡಾ|| ಎಲ್ ಚಂದ್ರಮಣಿ ಸಿಂಗ್ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.ಇಂಫಾಲದಲ್ಲಿ ಶುಕ್ರವಾರ ರಾತ್ರಿ 11.50 ರ ಸುಮಾರಿಗೆ ಅವರು ಕೊನೆಯುಸಿರೆಳೆದರು. ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. 1972 ರಲ್ಲಿ ರಾಜಕೀಯ ಸೇರಿದ ಬಳಿಕ ಎರಡು ಬಾರಿ ಉಪಮುಖ್ಯಮಂತ್ರಿಯಾಗಿದ್ದರು. ಒಮ್ಮೆ ಸ್ಪೀಕರ್ ಹಾಗೂ ಸಚಿವರೂ ಆಗಿದ್ದರು.ಮಣಿಪುರ ಪೀಪಲ್ಸ್ ಪಾರ್ಟಿ ಅಧ್ಯಕ್ಷರೂ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಮಣಿಪುರ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೂ ಆಗಿದ್ದರು. ಇಂಪಾಲ ಪಶ್ಚಿಮದ ನಿವಾಸಿಯಾದ ಅವರು ಮೂರು ಪುಸ್ತಕಗಳನ್ನೂ ರಚಿಸಿದ್ದರು.ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೇರಿದಂತೆ ಹಲವು ನಾಯಕರು ಡಾ|| ಎಲ್ ಚಂದ್ರಮಣಿ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.