ದಿಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ನಿಧನ

ನವದೆಹಲಿ, ಜೂನ್ 29: ದಿಲ್ಲಿಯ ಮಾಜಿ ಕ್ರಿಕೆಟಿಗ ಸಂಜಯ್ ದೋಬಲ್ (53) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.ಕಳೆದ ಕೆಲವು ವಾರಗಳಿಂದ ಸಂಜಯ್ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಶನಿವಾರ ನಡೆಸಲಾದ ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿತು ಎಂದು ಅವರ ಪುತ್ರ ಸಿದ್ಧಾಂತ್ ಹೇಳಿದ್ದಾರೆ. ಸಂಜಯ್ ನಿಧನಕ್ಕೆ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿನೋದ್ ತಿಹಾರ ಸಂತಾಪ ಸೂಚಿಸಿದ್ದಾರೆ.ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.