ವಿಶೇಷ ಚೇತನ ಮಕ್ಕಳೊಂದಿಗೆ ಮಾಜಿ ಕೇಂದ್ರ ಸಚಿವ ಡಾ. ಎ. ನಾರಾಯಣಸ್ವಾಮಿ ಜನ್ಮದಿನ ಆಚರಣೆ

ವಿಶೇಷ ಚೇತನ ಮಕ್ಕಳೊಂದಿಗೆ ಮಾಜಿ ಕೇಂದ್ರ ಸಚಿವ ಡಾ. ಎ. ನಾರಾಯಣಸ್ವಾಮಿ ಜನ್ಮದಿನ ಆಚರಣೆ Former Union Minister Dr. A. Narayanaswamy's birthday celebration with specially-abled children

ಲೋಕದರ್ಶನ ವರದಿ 

ಹುಬ್ಬಳ್ಳಿ 17 : ವಿಶೇಷ ಚೇತನ ಮಕ್ಕಳೊಂದಿಗೆ ಮಾಜಿ ಕೇಂದ್ರ ಸಚಿವ ಡಾ. ಎ. ನಾರಾಯಣಸ್ವಾಮಿ ಜನ್ಮದಿನ ಆಚರಣೆ.ಮಾಜಿ ಕೇಂದ್ರ ಸಚಿವರು ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರಾದ  ಎ.ನಾರಾಯಣಸ್ವಾಮಿ ಅವರ ಜನ್ಮದಿನವನ್ನು ಹುಬ್ಬಳ್ಳಿಯ ಗಬ್ಬೂರು ಸಮೀಪದ ವಿಶೇಷ ಚೇತನ ಮಕ್ಕಳ ಅನಾಥಾಶ್ರಮದಲ್ಲಿ ಅರ್ಥಪೂರ್ಣವಾಗಿ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆಚರಿಸಲಾಯಿತು. ಮಾದಾರ ಚನ್ನಯ್ಯ ಸೇವಾಸಮಿತಿಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಅನಾಥ ಮತ್ತು ವಿಶೇಷ ಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸುವ ಮೂಲಕ ಸಮಾಜ ಸೇವೆಯ ನಿಜವಾದ ಸಂದೇಶವನ್ನು ಸಾರಲಾಯಿತು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಹದೇವ ಮಾಳಗಿ, ಸಮಾಜಸೇವಕರಾದ ಶ್ರೀ ಗುರಣ್ಣ ಬೆಂಗಳೂರು ಅವರು ವಿಶೇಷ ಚೇತನ ಮಕ್ಕಳಿಗೆ ಹಣ್ಣು, ಬಿಸ್ಕತ್ ಮತ್ತು ಸಿಹಿ ವಿತರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಮಾದಾರ ಚನ್ನಯ್ಯ ಸೇವಾಸಮಿತಿ ಹುಬ್ಬಳ್ಳಿ ನಗರ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಕೊಂಡಪಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಎ. ನಾರಾಯಣಸ್ವಾಮಿ ಸಾಹೇಬರ ಸಾಮಾಜಿಕ ಸೇವೆ, ಬಡವರ ಮತ್ತು ದಲಿತಪರ ಕಾಳಜಿ ಹಾಗೂ ವಿಶೇಷವಾಗಿ ಒಳಮೀಸಲಾತಿ ಜಾರಿಗಾಗಿ ಮಾಡಿದ ಹೋರಾಟವನ್ನು ಸ್ಮರಿಸಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.ಕಾಂಗ್ರೆಸ್ ಜಿಲ್ಲಾ ಸಫಾಯಿ ಕರ್ಮಚಾರಿ ಘಟಕದ ಅಧ್ಯಕ್ಷರಾದ ಶ್ರೀ ಪ್ರಕಾಶ ಹುಬ್ಬಳ್ಳಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿ, ಸಮಾಜ ಸೇವೆಯ ಮೂಲಕ ಮಹಾನ್ ನಾಯಕರ ಜನ್ಮದಿನವನ್ನು ಆಚರಿಸುವುದು ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾದಿಗ ದಂಡೋರ ಎಂಆರ್‌ಎಚ್‌ಎಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಅನಂತಪುರ, ಹಿರಿಯ ಮುಖಂಡರಾದ ಶ್ರೀ ಯಲ್ಲಪ್ಪ ಜಕನೂರ, ಶ್ರೀ ದೇವೇಂದ್ರಣ್ಣ, ಸಾಮರಸ್ಯ ವೇದಿಕೆ ಜಿಲ್ಲಾ ಸಹ ಸಂಚಾಲಕರಾದ ಶ್ರೀ ಪ್ರಕಾಶ ಗುಡಿಹಾಳ, ಬಿಜೆಪಿ ಮುಖಂಡರಾದ ಶ್ರೀ ಹನುಮಂತ ಯಾರಗುಂಟಿ, ಶ್ರೀ ರಘು ಬಳ್ಳಾರಿ, ಶ್ರೀ ವೆಂಕಟೇಶ್ ಅರಪನಾಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು, ವಿಶೇಷ ಚೇತನ ಮಕ್ಕಳಿಗೆ ಸಿಹಿ ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಖಜರಚಿಡಿ,ಒಂಏಽ8884448050