ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡು ಪ್ರೀಜ್ ನಿಧನ

ಜೋಹಾನ್ಸ್ ಬರ್ಗ್, ಏ 10,ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡದ ಆಯ್ಕೆಗಾರ ಜಾನ್ ಹಾರ್ಕೋಟ್ ಡು ಪ್ರೀಜ್ ಧೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.ಪ್ರೀಜ್ ಅವರು ಜಿಂಬಾಬ್ವೆಯ ಹರಾರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಮಾಧ್ಯಮ ಪ್ರಕಟಣೆಯಲ್ಲಿ ದಕ್ಷಿಣ ಆಫ್ರಿಕಾ ತಿಳಿಸಿದೆ.ತನ್ನ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ ಅನೇಕ ಜಿಂಬಾಬ್ವೆ ಕ್ರಿಕೆಟಿಗರ ಪೈಕಿ ಇವರು ಸಹ ಒಬ್ಬರಾಗಿದ್ದಾರೆ.1960ರ ದಶಕದಲ್ಲಿ ದ.ಆಫ್ರಿಕಾ ದೇಶಿಯ ಕ್ರಿಕೆಟ್ ನಲ್ಲಿ ಲೆಗ್ -ಸ್ಪಿನ್ನರ್ ಗಳ ಅಪರೂಪದ ತಳಿಯ ಭಾಗವಾಗಿದ್ದ ಅವರು, ನಿಜವಾದ ಆಲ್ ರೌಂಡರ್ ಎಂದು ಪರಿಗಣಿಸಲ್ಪಡುವ ಸಾಕಷ್ಟು ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಮತ್ತು 1966ರಲ್ಲಿಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು  ಪ್ರತಿನಿಧಿಸಿದ್ದರು.