ರಾಂಚಿ: ಮಾಜಿ ಶಾಸಕ ರಾಮಚಂದ್ರ ಬೈತಾ ನಿಧನ

ರಾಂಚಿ, ಮಾ.26 ಕಾಂಕೆ ಕ್ಷೇತ್ರದ ಮಾಜಿ ಶಾಸಕ ರಾಮಚಂದ್ರ ಬೈತಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಕಾಂಕೆ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು. ಬೆಳಗ್ಗಿನ ಜಾವ 1 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ.ಬೈತಾ ಅವರು 1990, 1995, 2005 ಮತ್ತು 2009 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಕಾಂಕೆ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರ ನಿಧನಕ್ಕೆ ಕ್ಷೇತ್ರಾದ್ಯಂತ ಶೋಕ ವ್ಯಕ್ತವಾಗಿದೆ.ಅವರ ಅಂತಿಮ ವಿಧಿ ವಿಧಾನಗಳನ್ನು ಸುಕುರ್ಹುತುವಿನ ರಿಂಗ್ ರಸ್ತೆಯಲ್ಲಿರುವ ಮುಕ್ತಿ ಧಾಮ್ ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.