ಮಾಜಿ ಸಂಸದ ಸುಖ್ದೇವ್ ಸಿಂಗ್ ಲಿಬ್ರಾ ನಿಧನ

ಫತೇಘರ್ ಸಾಹಿಬ್, ಸೆ 6:  ಮಾಜಿ ಸಂಸದ ಸುಖ್ದೇವ್ ಸಿಂಗ್ ಲಿಬ್ರಾ (87) ಶುಕ್ರವಾರ ಬೆಳಗ್ಗಿನ ಜಾವ ದೀರ್ಘಕಾಲಿನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಲೂದಿಯಾನ ಜಿಲ್ಲೆಯ ಖನ್ನಾ ಬಳಿಯ ಲಿಬ್ರಾ ಗ್ರಾಮದಲ್ಲಿ ಅವರು ನೆಲೆಸಿದ್ದರು. ಲಿಬ್ರಾ ಅವರು ಎಸ್ಜಿಪಿಸಿ ಮಾಜಿ ಅಧ್ಯಕ್ಷ ಗುರುಚರಣ್ ಸಿಂಗ್ ತೋಹ್ರಾ ಅವರ ಆಪ್ತರಾಗಿದ್ದರು. ಅವರು 14ನೇ ಲೋಕಸಭಾ ಮತ್ತು 15ನೇ ಲೋಕಸಭೆಯ ಸದಸ್ಯರಾಗಿದ್ದರು. 1985ರಲ್ಲಿ ಪಂಜಾಬ್ ವಿಧಾನಸಭೆಯ ಸದಸ್ಯರಾಗಿದ್ದ ಅವರು, 1998-2004ರಲ್ಲಿ ಅವರು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.    ಲಿಬ್ರಾ ಅವರು ಪಂಜಾಬ್ನ ಫತೇಘರ್ ಸಾಹಿಬ್ ಮತ್ತು ರೋಪರ್ ಸಂಸತ್ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದರು. ಲಿಬ್ರಾ ಅವರು ಕಾಂಗ್ರೆಸ್ ಸೇರಿದ ಬಳಿಕ ಫತೇಘರ್ ಸಾಹಿಬ್ ಕ್ಷೇತ್ರದಿಂದ ಸಂಸತ್ ಚುನಾವಣೆಯಲ್ಲಿ ಸ್ಪಧರ್ಿಸಿ ಗೆಲುವು ಪಡೆದರು. ನಂತರ ಅವರು ಎಸ್ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಪ್ರಯತ್ನದಿಂದ ಶಿರೋಮಣಿ ಅಕಾಲಿ ದಳಕ್ಕೆ ಮತ್ತೆ ಸೇರಿದರು. ಅವರು ಎಸ್ಜಿಪಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಎಸ್ಜಿಪಿಸಿ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸುದೀರ್ಘ ಕಾಲ ಸದಸ್ಯರಾಗಿದ್ದರು. 

**