ಲೋಕದರ್ಶನವರದಿ
ಬ್ಯಾಡಗಿ15:ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಕಾಯಿದೆಗೆ ತಿದ್ದುಪಡಿ ತರಲು ನಿರ್ಧರಿಸುವ ರಾಜ್ಯ ಸಕರ್ಾರದ ಕ್ರಮ ಅವೈಜ್ಞಾನಿಕವಾಗಿದ್ದು ಸಾವಿರಾರು ಕೋಟಿ ಆದಾಯ ತರುತ್ತಿರುವ ತನ್ನದೇ ಅಂಗ ಸಂಸ್ಥೆಗಳನ್ನು ಮುಚ್ಚಿಸಲು ಹೊರಟಿ ರುವದು ರೈತರಿಗೆ ಹಾಗೂ ವರ್ತಕರಿಗೆ ದ್ರೋಹವೆಸಗಿದಂತೆ ಕೂಡಲೇ ಸಕರ್ಾರ ತನ್ನ ನಿಧರ್ಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ರಾಜ್ಯ ಸಕರ್ಾರಕ್ಕೆ ಆಗ್ರಹಿಸಿದರು.
ಪಟ್ಟಣದ ವರ್ತಕರ ಸಂಘದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಸಲಹೆ ಮೇರೆಗೆ ಮಾದರಿ ಕೃಷಿ ಉತ್ಪಾದನೆ ಮತ್ತು ಜಾನುವಾರು ಮಾರುಕಟ್ಟೆ ಕಾಯ್ದೆ 2017 ಅನ್ನು ಅಂಗೀಕರಿಸಲು ರಾಜ್ಯ ಕ್ಯಾಬಿನೆಟ್ ನಿರ್ಧರಿಸಿದ್ದು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಮಾರ್ಗ ಹಿಡಿದಿರುವುದು ದುರದೃಷ್ಟಕರ, ತಿದ್ದುಪಡಿ ರೈತರಿಗೆ ಅತ್ಯಂತ ಮಾರಕವಾಗಿದ್ದು ಸಾಕಷ್ಟು ನ್ಯೂನ್ಯತೆಗಳಿವೆ ತಿದ್ದುಪಡಿಯಿಂದ ಯಾವುದೇ ಕಾರಣಕ್ಕೂ ಸಕರ್ಾರದ ಉದ್ದೇಶ ಈಡೇರುವುದಿಲ್ಲ ಎಂದರು.
ರೈತನ ನೆರವಿಗೆ ಬಂದಿರುವ ಎಪಿಎಂಸಿಗಳು: ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿಬರ್ಂಧ ತೆಗೆದು ಹಾಕುವುದೂ ಸೇರಿ ದಂತೆ ರೈತನ ಬೆಳೆಗೆ ನೇರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಭರದಲ್ಲಿ ದಲಾಲರನ್ನು (ಕಮೀಶನ್ ಏಜೆಂಟ) ಮತ್ತು ಅಧೀಕೃತ ಎಪಿಎಂಸಿಗಳನ್ನು ಹಾಳು ಮಾಡುವುದು ಸರಿಯಾದ ಕ್ರಮವಲ್ಲ, ಕಳೆದ ನೂರಾರು ವರ್ಷಗಳಿಂದ ಎಲ್ಲ ರೀತಿಯಿಂದ ರೈತನ ನೆರವಿಗೆ ಬಂದ ಎಪಿಎಂಸಿಗಳು ವರದಾಯಕವಾಗಿವೆ ಎಂದರು.
ವಾಸ್ತವವೇ ಬೇರೆ: ವ್ಯವಸ್ಥಿತ ಮಾರಾಟಕ್ಕಾಗಿ ಕೃಷಿಕರ ಎಲ್ಲ ಹುಟ್ಟುವಳಿಗಳನ್ನು ಎಪಿಎಂಸಿಗಳ ಮೂಲಕ ನಿಯಂತ್ರಿಸಲಾಗುತ್ತಿದೆ ಅಧೀಕೃತ ಕಮೀಶನ್ ಏಜೆಂಟನಿಂದ ಖರೀದಿದಾರನಿಗೆ ಅಗತ್ಯ ವಸ್ತುಗಳು ಸಿಗುತ್ತಿದ್ದು ರೈತನ ಬೆಳೆ ಹಾಳಾಗದೇ ಸ್ಪಧರ್ಾತ್ಮಕ ದರದಲ್ಲಿ ಅಂದೇ ಮಾರಾಟ ಮತ್ತು ಹಣ ರೈತನ ಕೈಸೇರುತ್ತಿದೆ, ಅಷ್ಟಕ್ಕೂ ಕಮೀಶನ್ ಏಜೆಂಟರು ಈ ಮೊದಲು ರೈತನಿಂದ ಪಡೆಯುತ್ತಿದ್ದ ದಲಾಲಿ ಇಲ್ಲವೆಂಬ ಕಾನೂನು ತೆಗೆದು ಹಾಕಿದ್ದು, ವರ್ತಕರುಗಳಿಂದ ಶೇ.2 ರೂ.ಸಂಗ್ರಹಿಸಿ ರೈತನಿಗೆ ಪುಕ್ಕಟೆ ಯಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾ ಬಂದಿದ್ದಾರೆ ಎಂದರು.
ಮಧ್ಯವತರ್ಿಗಳಿಲ್ಲದೇ ಸಾಧ್ಯವಿಲ್ಲ: ವರ್ತಕ ಸುರೇಶ ಮೇಲಗಿರಿ ಮಾತನಾಡಿ, ಎಪಿಎಂಸಿಗಳ ಹಸ್ತಕ್ಷೇಪ ಅಥವಾ ನಿಯಂತ್ರಣ ವಿಲ್ಲದೇ ಕೃಷಿ ಹುಟ್ಟುವಳಿಗಳ ಮಾರಾಟ ಸಾಧ್ಯವೇ..? ಆಹಾರ ಸಂಸ್ಕರಣಾ ಕಂಪನಿಗಳು ರೈತನಿಂದ ನೇರವಾಗಿ ಸರಕು ಸಂ ಗ್ರಹಿಸಲು ಸಾಧ್ಯವೇ..?ರೈತನ ಬೆಳೆಗೆ ಸ್ಪಧರ್ಾತ್ಮಕ ದರದಲ್ಲಿ ಮಾರಾಟ ಹಣಕ್ಕೆ ಮೋಸವೆಸಗಂತೆ ವ್ಯಾಪಾರಸ್ಥರಿಂದ ಕೊಡಿ ಸುವ ನಿಟ್ಟಿನಲ್ಲಿ ಕಮೀಶನ್ ಎಜೆಂಟ್ರುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು ರೈತ ವಿರೋಧಿ ತಿದ್ದುಪಡಿ ಕಾಯಿದೆ ಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.
ಬೀದಿಗೆ ಬರಲಿದ್ಧಾರೆ ಸಾವಿರಾರು ವ್ಯಾಪಾರಿಗಳು:ಗೌರವ ಕಾರ್ಯದಶರ್ಿ ರಾಜು ಮೋರಿಗೇರಿ ಮಾತನಾಡಿ, ರಾಜ್ಯದಲ್ಲಿ 162 ಕ್ಕೂ ಹೆಚ್ಚು ಎಪಿಎಂಸಿಗಳು ಮತ್ತು 354 ಕ್ಕೂ ಹೆಚ್ಚು ಉಪಮಾರುಕಟ್ಟೆ ಹೊಂದಿದ್ದು, ಇವುಗಳಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ಸಾವಿರ ಕೋಟಿ ರೂ.ಗಳಿಗೂ ಅಧಿಕ ಆದಾಯವಿದೆ.
ಎಪಿಎಂಸಿಗಳಲ್ಲಿ ಅಧೀಕೃತ ಲೈಸನ್ಸ್ ಹೊಂದಿರುವ ಸುಮಾರು 17 ಸಾವಿರ ವರ್ತಕರು 34 ಸಾವಿರ ಕಮೀಶನ್ ಏಜೆಂಟರು ಬೀದಿಗೆ ಬರಲಿದ್ದಾರೆ ತಿದ್ದುಪಡಿ ಕಾಯಿದೆ ತರದಂತೆ ಮುಖ್ಯ ಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವದು ಎಂದರು. ಸಭೆಯಲ್ಲಿ ವರ್ತಕ ಸಂಘದ ಪ್ರತಿ ನಿಧಿಗಳು ಉಪಸ್ಥಿತರಿದ್ದರು.