ಕೊಪ್ಪಳ :31 ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಮುಕ್ತಿ ನಜೀರ್ ಅಹಮ್ಮದ್ ಟಸ್ಕಿನ್ ಕುರಾನ್ ಪಠಣದ ಮೂಲಕ ನೇರವೇರಿಸಿದ ಬಳಿಕ ಹಬ್ಬದ ಸಂಭ್ರಮಾಚರಣೆಯಲ್ಲಿ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ ಪಾಲ್ಗೊಂಡು ಮುಸ್ಲಿಂ ಬಾಂದವರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಎಸ್.ಬಿ ನಾಗರಳ್ಳಿ ಗವಿಸಿದ್ದಪ್ಪ ಮುದಗಲ್, ರಾಜಶೇಖರ ಆಡೂರು ಯುವ ನಾಯಕ ಕೆ. ಸೋಮಶೇಖರ ಹಿಟ್ನಾಳ ಸಮಾಜದ ಮುಖಂಡರುಗಳಾದ ಪಾಷುಸಾಬ ಕತ್ತಿಬ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷ ಪಲ್ಟನ್ ಇಕ್ಬಲ್ ಸಿದ್ದಿಕಿ ಇಬ್ರಾಹಿಮ್ ಅಡ್ಡೆವಾಲಿ ಅಜುಮುದ್ದಿನ್ ಅತ್ತಾರ ಜಾಫರ್ ಖಾನ್ ಹಾಗೂ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.