ಲೋಕದರ್ಶನ ವರದಿ
ನೂತನ ಮೇಯರ ಮತ್ತು ಉಪಮೇಯರ ಅವರನ್ನು ಮಾಜಿ ಶಾಸಕ ಅನಿಲ್ ಬೆನಕೆ ಸನ್ಮಾನಿಸಿದರು
ಬೆಳಗಾವಿ, 18; ಮಾ 18, ರಂದು, ಚವಾಟ ಗಲ್ಲಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಉತ್ತರದ ಮಾಜಿ ಶಾಸಕ ಅನಿಲ್ ಬೆನಕೆ ಅವರ ಕಚೇರಿಯಲ್ಲಿ, ಮೇಯರ್ ಆಗಿ ಆಯ್ಕೆಯಾದ ವಡಗಾವ ವಾರ್ಡ್ ಸಂಖ್ಯೆ 41 ರ ಕಾರ್ೊರೇಟರ್ ಮಂಗೇಶ್ ಪವಾರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾದ ಅನಗೋಳ ಚಿಂದಾಬರ್ ನಗರದ ವಾರ್ಡ್ ಸಂಖ್ಯೆ 44 ರ ವಾಣಿ ವಿಲಾಸ್ ಜೋಶಿ ಅವರನ್ನು ಸತ್ಕರಿಸಲಾಯಿತು ಮತ್ತು ಅವರ ಭವಿಷ್ಯದ ಎಲ್ಲ ಜನ ಪರ ಕಾರ್ಯಗಳಿಗೆ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಕಾರ್ೊರೇಟರ್ ಶ್ರೇಯಶ್ ನಕಾಡಿ, ವಕೀಲ ದೇವರಾಜ್ ಬಸ್ತ್ವಾಡೆ, ವಿವೇಕ್ ಮೋಹಿತೆ, ವಿನಾಯಕ್ ಪವಾರ್, ಪವನ್ ಕಿಲ್ಲೇಕರ್, ಅಭಿಷೇಕ್ ನಾಯಕ್ ಮತ್ತು ಅನಂತ್ ಹಂಗಿರ್ಗೇಕರ್ ಉಪಸ್ಥಿತರಿದ್ದರು.