ಶ್ರೀರಾಮ ಒಬ್ಬ ಆದರ್ಶ ಪುರುಷನಾಗಿದ್ದಾನೆ: ವೀರನಾಯ್ಕ ನಾಯ್ಕರ

Sri Rama is an ideal man: Veeranayka Naykara

ಬೆಟಗೇರಿ 06: ಒಬ್ಬ ಆದರ್ಶ ವ್ಯಕ್ತಿ ಹೀಗೆ ಇರಬೇಕೆಂದು ಶ್ರೀರಾಮನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಪುರುಷ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀರಾಮ ಅಭಿಮಾನಿ ಬಳಗದ ಸಂಚಾಲಕ ವೀರನಾಯ್ಕ ನಾಯ್ಕರ ಹೇಳಿದರು. 

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀರಾಮ ಅಭಿಮಾನಿ ಬಳಗದ ಸಹಯೋಗದಲ್ಲಿ ಏ.6ರಂದು ಬೆಟಗೇರಿ ಗ್ರಾಮದಲ್ಲಿ ನಡೆದ ಶ್ರೀರಾಮ ನವಮಿ ದಿನಾಚರಣೆ ಕಾರ‌್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀರಾಮ ಒಬ್ಬ ಆದರ್ಶ ಪುರುಷನಾಗಿದ್ದಾನೆ. ಶ್ರೀರಾಮನ ತತ್ವಾದರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ವಿಜಯ ಮಠದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀರಾಮನ ಭಾವಚಿತ್ರಕ್ಕೆ ಮಹಾಪೂಜೆ,ಪುಷ್ಪಾರ್ಪಣ  ಸಮರ್ಪಿಸಿದರು, ಬೆಟಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆದ ಬಳಿಕ ಸಿಹಿ ವಿತರಣೆ ಮತ್ತು ಮಹಾಪ್ರಸಾದ ಜರುಗಿತು. 

ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಚಂದರಗಿ, ಶಿವಾಜಿ ನೀಲಣ್ಣವರ, ಈರಣ್ಣ ಬಳಿಗಾರ, ಅಶೋಕ ಕೋಣಿ, ಲಕ್ಕಪ್ಪ ಚಂದರಗಿ, ಬಸವರಾಜ ಪಣದಿ, ರಾಮಣ್ಣ ಬಳಿಗಾರ, ಕೆಂಪಣ್ಣ ಪೇದನ್ನವರ, ಅಶೋಕ ರಾಮಗೇರಿ, ಭೀಮಪ್ಪ ಪೇದನ್ನವರ, ಹನಮಂತ ವಗ್ಗರ, ಸದಾಶಿವ ಕುರಿ, ಮಲ್ಲಿಕಾರ್ಜುನ ಪೇದನ್ನವರ, ಮಲ್ಲಪ್ಪ ಪೇದನ್ನವರ, ಭರಮಣ್ಣ ಪೋಜೇರಿ, ಲಕ್ಷ್ಮಣ ಚಿನ್ನನ್ನವರ, ನಾಗಪ್ಪ ವಗ್ಗರ, ತಮ್ಮಣ್ಣ ಮೆಟ್ಟಿನ್ನವರ, ಸಂಜು ಪೂಜೇರಿ, ಭೀಮನಾಯ್ಕ ನಾಯ್ಕರ, ಇಡಪ್ಪ ರಾಮಗೇರಿ, ಬಾಳಪ್ಪ ಮೆಟ್ಟಿನ್ನವರ, ಮಲ್ಲಪ್ಪ ಕಳಸಪ್ಪಗೋಳ, ಬಸಪ್ಪ ಪೇದನ್ನವರ, ಸ್ಥಳೀಯ ಶ್ರೀರಾಮ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.