ಲಂಡನ್, ಏ.06, ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಪೀಟರ್ ವಾಕರ್ (84) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗ್ಲಾಮೋರ್ಗನ್ ಕ್ಲಬ್ ಪರವಾಗಿ ಅವರು ಪ್ರಥಮ ದರ್ಜೆ ಕ್ರಿಕೆಟ್ ಆಡಿದರು.ಪೀಟರ್ 1956 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು, ಅದಕ್ಕೂ ಮೊದಲು ಅವರು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದರು. ಪೀಟರ್ ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ ಬೌಲರ್. ಉತ್ತಮ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಪೀಟರ್ ಅತ್ಯುತ್ತಮ ಫೀಲ್ಡರ್ ಆಗಿದ್ದರು. ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 697 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಅವರು ಸ್ಲಿಪ್ ಮತ್ತು ಶಾರ್ಟ್ ಲೆಗ್‌ನಲ್ಲಿ ಅದ್ಭುತ ಫೀಲ್ಡರ್ ಆಗಿದ್ದರು. ಇಂಗ್ಲೆಂಡ್ ಪರವಾಗಿ, ಪೀಟರ್ ತನ್ನ 24 ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದರು. ಎಡ್ಜ್‌ಬಾಸ್ಟನ್‌ನಲ್ಲಿ ಆಡಿದ ಈ ಟೆಸ್ಟ್‌ನಲ್ಲಿ ಪೀಟರ್ ಒಂಬತ್ತು ಮತ್ತು 37 ರನ್ ಗಳಿಸಿದರು. ಇದರ ನಂತರ, ಲಾರ್ಡ್ಸ್ ಮೈದಾನದಲ್ಲಿ ಆಡಿದ ಸರಣಿಯ ಮತ್ತೊಂದು ಟೆಸ್ಟ್‍ನಲ್ಲಿ ಪೀಟರ್ ತನ್ನ ವೃತ್ತಿಜೀವನದ ಏಕೈಕ ಅರ್ಧಶತಕವನ್ನು ಗಳಿಸಿದ್ದರು. ಪೀಟರ್ ಇಂಗ್ಲೆಂಡ್ ಪರ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದರು