ಜಮ್ಮು- ಕಾಶ್ಮೀರ ವ್ಯವಹಾರಗಳ ಬಗ್ಗೆ ಐವರು ಸಚಿವರ ಗುಂಪು( ಜಿಓಎಂ) ರಚನೆ

ನವದೆಹಲಿ,    ಜಮ್ಮು ಮತ್ತು ಕಾಶ್ಮೀರ ಕುರಿತಂತೆ  ಕೇಂದ್ರ ಸರ್ಕಾರ  ಐವರು  ಕೇಂದ್ರ ಸಚಿವರ ಗುಂಪನ್ನು (ಜಿಓಎಂ) ರಚಿಸಿದೆ.  

ಸಚಿವರ  ಗುಂಪಿನಲ್ಲಿ   ಕಾನೂನು ಸಚಿವ  ರವಿಶಂಕರ್ ಪ್ರಸಾದ್, ಸಾಮಾಜಿಕ ನ್ಯಾಯ ಸಚಿವ ಥಾವರ್  ಚಂದ್ ಗೆಹ್ಲೋಟ್,   ಪ್ರಧಾನಿ ಕಾರ್ಯಾಲಯ ಸಚಿವ ಜಿತೇಂದರ್ ಸಿಂಗ್,  ಕೃಷಿ ಸಚಿವ ನರೇಂದ್ರ ಸಿಂಗ್  ತೋಮರ್ ಮತ್ತು ಪೆಟ್ರೋಲಿಯಂ ಸಚಿವ ಧರ್ಮೆಂದ್ರ  ಪ್ರಧಾನ್  ಒಳಗೊಂಡಿದ್ದಾರೆ.  \\ 

ನೂತನವಾಗಿ  ರಚಿಸಲಾಗಿರುವ   ಕೇಂದ್ರಾಡಳಿತ  ಪ್ರದೇಶ  ಜಮ್ಮು ಮತ್ತು ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ    ಈ ಸಚಿವರ  ಗುಂಪು    ನಿರ್ಧಿಷ್ಟ ಗುರಿ ತಲುಪಬೇಕಾದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಿದೆ.  

ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ  ಸ್ಥಿತಿಯನ್ನು  ನೆಲೆಗೊಳಿಸಲು   ಈ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬೃಹತ್ ಪ್ಯಾಕೇಜ್ ಘೋಷಿಸಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ   ಸಚಿವರ ಗುಂಪು  ರಚಸಿರುವುದು  ಮಹತ್ವ ಪಡೆದುಕೊಂಡಿದೆ. ಮುಂದಿನ  ದಿನಗಳಲ್ಲಿ   ಕಾಶ್ಮೀರ ಯುವಕರಿಗೆ  ದೊಡ್ಡ ಪ್ರಮಾಣದ ಉದ್ಯೋಗ ಅವಕಾಶಗಳ  ಲಭ್ಯವಾಗುವಂತೆ   ಸರ್ಕಾರ  ಕಾರ್ಯಕ್ರಮ ಯೋಜಿಸಿದೆ.