ಕಾರವಾರ, ಫೆ.5 : ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ( ತಡೆಗಟ್ಟುವಿಕೆ, ನಿಷೇಧಿಸುವಿಕೆ. ನಿವಾರಿಸುವಿಕೆ) ಕಾಯ್ದೆ 2013 ರಂತೆ ಯಾವುದೇ ಒಂದು ಕಚೇರಿ/ಸಂಸ್ಥೆ/ಅಥವಾ ಕೆಲಸದ ಸ್ಥಳಗಳಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು “ಸಿಬ್ಬಂಧಿಗಳು" ಕೆಲಸ ಮಾಡುತ್ತಿದ್ದರೆ ಆ ಸಂಸ್ಥೆಯ ಮಾಲೀಕರು/ಮುಖ್ಯಸ್ಥರು ಆ ಕಚೇರಿ/ಸಂಸ್ಥೆ ಅಥವಾ ಕೆಲಸದ ಸ್ಥಳಗಳಲ್ಲಿ ಒಂದು "ಆಂತರಿಕ ದೂರು ಸಮಿತಿ" ಯನ್ನು ರಚನೆ ಮಾಡಬೇಕಾಗಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ/ಸರಕಾರಿ ಕಚೇರಿ/ಕೈಗಾರಿಕಾ/ಸಂಸ್ಥೆ/ಅಂಗಡಿ/ಮಾಲ್ ಹಾಗೂ ಇತರೆ ಸಂಸ್ಥೆಗಳಲ್ಲಿ/ ಕೆಲಸದ ಸ್ಥಳಗಳಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು "ಸಿಬ್ಬಂಧಿಗಳು" ಕೆಲಸ ಮಾಡುತ್ತಿದ್ದರೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಕಾಯ್ದೆ 2013 ರಡ್ಡಿ " ಆಂತರಿಕ ದೂರು ಸಮಿತಿ" ಯನ್ನು ರಚಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿಯನ್ನು ನೀಡುವಂತೆ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ ರವರಿಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.