ಮನುಷ್ಯನ ದುರಾಸೆಯಿಂದ ಅರಣ್ಯ ಸಂಪತ್ತು ನಾಶ: .ಪಾಟೀಲ್‌

Forest wealth is being destroyed due to human greed: Patil

ಮನುಷ್ಯನ ದುರಾಸೆಯಿಂದ ಅರಣ್ಯ ಸಂಪತ್ತು ನಾಶ: .ಪಾಟೀಲ್‌

ಹೂವಿನಹಡಗಲಿ 21: ಪ್ರಸ್ತುತ ದಿನಗಳಲ್ಲಿ ಮನುಷ್ಯನ ದುರಾಸೆ.ವಿಕೃತ ಚಟುವಟಿಕೆ ಗಳಿಂದ ಅರಣ್ಯ ನಾಶವಾಗಿ ಮುಂದಿನ ಪೀಳಿಗೆಗೆ ಭೂಮಿ ಮೇಲಿನ ಸಂಪನ್ಮೂಲಗಳ ಕೊರತೆ ಬಗ್ಗೆ ಜಾಗೃತಿ ಅಗತ್ಯ ಎಂದು ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ್ ವಿಷಾಧ ವ್ಯಕ್ತಪಡಿಸಿದರು. 

 ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಕಾಲೇಜಿನ ಪ್ರಾಣಿ ಶಸ್ತ್ರ ಮತ್ತು ಸಸ್ಯ ಶಾಸ್ತ್ರ  ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. 

ಅರಣ್ಯ ರಕ್ಷಣೆ ಗೆ ಪ್ರತಿ ಮನೆ ಗೆ ಒಂದು ಗಿಡವನ್ನು ನಟ್ಟು ಪಾಲನೆ ಮಾಡಬೇಕು ಜತೆಗೆ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ ಪಕ್ಷಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಎಂದ ಅವರು ಕೆರೆ ಕಟ್ಟೆ ಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಬೇಕು ಎಂದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಸದಾಶಿವ ಮಾತನಾಡಿ, ವಿಜ್ಞಾನ ಮತ್ತು ಮಣ್ಣು ಸಂರಕ್ಷಣೆ ಮುಂದಾಗಿ ಎಂದರು. 

ಐಕ್ಯೂಎಸಿ ಸಂಯೋಜನಕಿ ಡಾ.ಮಹಿಮಾ ಜ್ಯೋತಿ, ಪ್ರಾಧ್ಯಾಪಕ ಡಾ.ಚಂದ್ರಬಾಬು ಹಾಗೂ ಇತರರು ಮಾತನಾಡಿದರು.ದೈಹಿಕ ನಿರ್ದೇಶಕ ಬಡೇಸಾಬ್ ನಾಯಕ, ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ.ಹರ್ಷ, ಎಸ್‌.ಬಿ.ಸಂಜಯ್, ಚಂದನಾ ಹೆಚ್‌.ಎಂ, ಚೈತ್ರ ಜೆ, ಕುಸುಮ ಹೆಚ್‌.ಎಂ, ಅನ್ನದಾನಪ್ಪ, ಎ.ಎಂ.ಪಿ.ಸಂದೀಪ ಹಾಗೂ ವಿದ್ಯಾರ್ಥಿಗಳು ಇತರರಿದ್ದರು.