ನವದಹಲಿ, ಮೇ ೩೦, ಕನಿಷ್ಟ ಬೆಂಬಲ ಬೆಲೆ ( ಎಂಎಸ್ ಪಿ) ಪಟ್ಟಿಗೆ ಹೆಚ್ಚುವರಿಯಾಗಿ ೨೩ ಅರಣ್ಯ ಕಿರು ಉತ್ಪನ್ನಗಳನ್ನು ಸೇರ್ಪಡೆಗೊಳಿಸಿರುವುದಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಕಾಡು ತುಳಸಿ ಬೀಜ, ಕಾಡು ಜೀರಿಗೆ, ಅಣಬೆ, ಕಪ್ಪು ಅಕ್ಕಿ ಹಾಗೂ ಜೋಹಾರ್ ಅಕ್ಕಿ ಸೇರಿ ಇನ್ನಿತರ ೨೩ ಕಿರು ಅರಣ್ಯ ಉತ್ಪನ್ನಗಳು ಈ ಪಟ್ಟಿಯಲ್ಲಿ ಸೇರಿವೆ.
ಕೋವಿಡ್ -೧೯ ಸಾಂಕ್ರಾಮಿಕ ಹಿನ್ನಲೆಯಲ್ಲಿ ಬುಡಕಟ್ಟು ಅರಣ್ಯ ಕಿರು ಉತ್ಪನ್ನಗಳಿಗೆ ಉತ್ತೇಜನ ನೀಡುವ ಕ್ರಮವಾಗಿ ೫೦ ರಿಂದ ೭೩ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸದಾಗಿ ಸೇರ್ಪಡೆಗೊಳಿಸಲಾದ ಉತ್ಪನ್ನಗಳ ಪೈಕಿ ೧೪ ಕೃಷಿ ಉತ್ಪನ್ನಗಳಾದರೂ, ಈಶಾನ್ಯ ಭಾರತದಲ್ಲಿ ವಾಣಿಜ್ಯಕವಾಗಿ ಅವುಗಳನ್ನು ಬೆಳೆಯುತ್ತಿಲ್ಲ . ದಟ್ಟ ಅರಣ್ಯಗಳಲ್ಲಿ ಮಾತ್ರ ಈ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಹಾಗಾಗಿ ಈ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸೇರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.