ಬ್ಯಾಡಗಿ06: ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಿದ್ದು, ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಪ್ರಾಣಿ-ಪಕ್ಷಿಗಳು ಸೇರಿದಂತೆ ಮಾನವ ಸಂಕುಲದ ರಕ್ಷಣೆಗಾಗಿ ಪರಿಸರ ನಾಶವನ್ನು ತಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬಡಮಲ್ಲಿ ಗ್ರಾಮದ ಅಶೋಕಗೌಡ ಹೊಂಡದಗೌಡ್ರ ಅವರ ಜಮೀನಿನಲ್ಲಿ ನರೇಗಾ ಯೋಜನೆಯಲ್ಲಿ ನಿಮರ್ಿಸಿದ ಬದುಗಳ ಪಕ್ಕದಲ್ಲಿ ಕೃಷಿ ಇಲಾಖೆಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರ ಹೊಂದಬಹುದು. ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಮರವಾಗಿ ಬೆಳೆಸಬೇಕು. ಕೃಷಿ ಇಲಾಖೆಯ ಅರಣ್ಯ ಘಟಕದ ವತಿಯಿಂದ ನೀಡುತ್ತಿರುವ ನೆಡುವ ಸಸಿಗಳನ್ನು ಸಹ ಕಾಳಜಿಯಿಂದ ನೋಡಿಕೊಳ್ಳಬೇಕು. ನಿಸರ್ಗ ಸಂಪತ್ತು ಹೆಚ್ಚಿದರೆ ಜೀವ ಸಂಕುಲಕ್ಕೆ ಆಹ್ಲಾದಕರ ವಾತಾವರಣ ನಿಮರ್ಾಣವಾಗುತ್ತದೆ ಎಂದರು.
ಕೃಷಿ ಇಲಾಖೆಯ ಉಪ ನಿದರ್ೆಶಕಿ ಜಿ.ಎಸ್. ಸ್ಪೂತರ್ಿ ಮಾತನಾಡಿ, ಪರಿಸರ ವೈಪರಿತ್ಯದಿಂದಾಗಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೃಷಿ ಇಲಾಖೆಯ ಅರಣ್ಯ ಘಟಕದ ವತಿಯಿಂದ ರೈತರ ಜಮೀನುಗಳಲ್ಲಿ ಹಸರೀಕರಣ ಬೆಳೆಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ರೈತರ ಸಹಭಾಗಿತ್ವದಲ್ಲಿ ಬದು ನಿಮರ್ಾಣ, ಕೃಷಿ ಹೊಂಡ ನಿಮರ್ಾಣ, ರೈತರ ಹೊಲದಲ್ಲಿ ಸಸಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿದರ್ೆಶಕ ಬಸವರಾಜ ಮರಗಣ್ಣನವರ ಮಾತನಾಡಿ, ಕೃಷಿ ಇಲಾಖೆಯ ಅರಣ್ಯ ಘಟಕದ ವತಿಯಿಂದ ನಾಲ್ಕು ಸಾವಿರ ವಿವಿಧ ಜಾತಿಯ ಸಸಿಗಳನ್ನು ರೈತರ ಜಮೀನುಗಳಲ್ಲಿ ನೆಡಲು ಉದ್ದೇಶಿಸಿದ್ದು, ಇದರಲ್ಲಿ ತೇಗ, ಸಿಲ್ವರ್ ಓಕ್, ಹೊಂಗೆ, ಮಹಾಗನಿ, ಹೆಬ್ಬೇವು, ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ದಿನವೊಂದಕ್ಕೆ 2ಥ2ಥ2 ಅಡಿ ಎತ್ತರ ಮತ್ತು ಅಗಲದ ಅಳತೆಯಲ್ಲಿ ಐದು ಗುಂಡಿಗಳನ್ನು ತೆಗೆದು ಸಸಿಗಳನ್ನು ನೆಡಲು ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸದ ಆಧಾರದ ಮೇಲೆ 285 ರೂಗಳ ಮೊತ್ತವನ್ನು ಪಾವತಿಸಲಾಗುವುದು.
ರೈತರು ಸಹ ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜಗದೀಶ ಪೂಜಾರ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಕೃಷಿ ಅರಣ್ಯ ಘಟಕದ ವಲಯ ಅರಣ್ಯಾಧಿಕಾರಿ ಮಂಜುನಾಥ, ಉಪ ಅರಣ್ಯಾಧಿಕಾರಿ ಜಗದೀಶ ಮಹಾರಾಜಪೇಟೆ, ಕೃಷಿ ಅಧಿಕಾರಿಗಳಾದ ಆರ್. ಮಂಜುನಾಥ, ಎಸ್.ಪಿ. ಮರಬಸಣ್ಣನವರ, ಪಿಡಿಓ ಬಸವರಾಜಗೌಡ ಶಿಡ್ರಳ್ಳಿ, ಜಲಾ ನಯನ ಸಹಾಯಕ ವೀರೇಶ ದೇಸೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.