ಗಿಡಮರಗಳನ್ನು ಕಡ್ಡಾಯವಾಗಿ ಬೆಳೆಸಲು ಮುಂದಾಗಿ: ಸಾವಿತ್ರವ್ವ

ಲೋಕದರ್ಶನವರದಿ

ಹಾವೇರಿ 06: ಪರಿಸರ ಉಳಿವಿಗಾಗಿ ಗಿಡಮರಗಳನ್ನು ಕಡ್ಡಾಯವಾಗಿ ಎಲ್ಲರೂ ಬೆಳೆಸಲು ಮುಂದಾಗಬೇಕಾಗಿದೆ ಎಂದು ಗ್ರಾ.ಪಂ ಅಧ್ಯಕ್ಷರಾದ ಸಾವಿತ್ರವ್ವ ಹಿರೇಮಠ ಹೇಳಿದರು.

ಜಿಲ್ಲೆಯ ಹಿರೇಮುಗದೂರಗ್ರಾ.ಪಂ ಹಾಗೂ ಅಮ್ಮಾ ಸಂಸ್ಥೆ(ರಿ)ಯ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಪಂಚಾಯತಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ಪರಿಸರ ಸಮತೋಲನದಿಂದ ನಾವೆಲ್ಲರೂಆರೋಗ್ಯದಿಂದಇರಲು ಸಾಧ್ಯ ಗಿಡ ಮರಗಳನ್ನು  ಬೆಳಿಸಿದರೆ ವಾತಾವರಣ ಉತ್ತಮವಾಗುತ್ತದೆ.ಆಮ್ಲಜನಕ ನೀಡುವ ಮರಗಳು ನಮಗೆ ಬೆಲೆ ಬಾಳುವ ಜೀವಕ್ಕೆ ಸಹಕಾರಿಯಾಗಲಿವೆ ಎಂದರು.

   ಪಿಡಿಓಯೋಗೇಶ್ವರಚಾಕರಿ ಮಾತನಾಡಿ ಪ್ರತಿ ವರ್ಷವೂ ಪರಿಸರ ದಿನ ನಾವೆಲ್ಲರೂ ಗಿಡಗಳನ್ನು ನೆಡುವ ದಿನವಾಗದೇಎಲ್ಲಿ ಸಾರ್ವಜನಿಕ ಆಸ್ತಿಗಳು ಇರುತ್ತೇವೆಅಲ್ಲಿ ಗಿಡಗಳನ್ನು ನೆಡಲಾಗುವುದು.ಮನೆಗೊಂದು ಮರ ಎಂಬ ಪರಿಸರ ಕಾಳಜಿಗೆ ನಾವೆಲ್ಲರೂ ಮುಂದಾಗಬೇಕಾಗಿದೆ.ಮಳೆ ಪ್ರಾರಂಭವಾಗುತ್ತಿದ್ದು,ಗ್ರಾ.ಪಂ ವ್ಯಾಪ್ತಿಯಲ್ಲಿ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಟ್ಟು ಅವುಗಳನ್ನು ಸಂರಕ್ಷಣಗೆಎಲ್ಲರೂ ಕೈಜೋಡಿಸಿ ಎಂದರು.

ತಾ.ಪಂ ಮಾಜಿಸದಸ್ಯರಾಜಶೇಖರ ಎಂ ಮಾತನಾಡಿಗಿಡ-ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಕರ್ಾರ ಹೆಚ್ಚು ಅನುದಾನವನ್ನು ನೀಡಲಾಗುತ್ತಿದೆ.ಪರಿಸರ ಸಂರಕ್ಷಣೆಯ ಕೆಲಸ ಪ್ರತಿಯೊಬ್ಬರದಾಗಿದ್ದು,ಸಾರ್ವಜನಿಕ  ಹಾಗೂ ನಮ್ಮ ಮನೆಗಳ ಮುಂಭಾಗಗಿಡ ನೆಡೋಣಎಂದರು.ವಿಶ್ವ ಪರಿಸರ ದಿನ  ನಿಮಿತ್ಯ ಸ್ಥಳೀಯ ಅಮ್ಮಾ ಸಂಸ್ಥೆ(ರಿ)ಯವರು ಗಿಡಗಳನ್ನು ಉಚಿತವಾಗಿ ನೀಡಿದರು.ಪರಿಸರ ಸಂರಕ್ಷಣೆಗೆಅಮ್ಮಾ ಸಂಸ್ಥೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.

          ಈ ಸಂದರ್ಭದಲ್ಲಿಗ್ರಾಪಂ ಸದಸ್ಯರಾದ ನೀಲಪ್ಪದೊಡ್ಡಮನಿ ,ಈರಣ್ಣ  ಸಿ.ಊರಿನ ಮುಖಂಡರಾದ ಶಿವಪುತ್ರಪ್ಪ ಹಿರೇಮಠ.ನಿಂಗಪ್ಪ ಆರೇರ, ಫಕ್ಕಿರಸ್ವಾಮಿ ಎಚ್.ಗ್ರಾಪಂ ಸಿಬ್ಬಂದಿಗಳಾದ ವೀರೇಶಕಮ್ಮಾರ.,ಅಡಿವೆಪ್ಪ ಯಲ್ಲಣ್ಣನವರ, ಪುಷ್ಪಾಎ.ಗುಡ್ಡಪ್ಪ ಎ ಇದ್ದರು.