ಲೋಕದರ್ಶನ ವರದಿ
ಗದಗ : ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ರಾಜ್ಯದಲ್ಲಿ ಹಸಿವುನಿಂದ ಬಳಲುತ್ತಿದ್ದ ಜನರಿಗಾಗಿ ಮುಕ್ತಿ ದೊರಕಿಸಲು ಹಸಿವುಮುಕ್ತ ರಾಜ್ಯವನ್ನಾಗಿಸಲು ಅನ್ನಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ನಗರದ ಕನಕ ಭವನದ ಆವರಣದಲ್ಲಿ ತಾಲ್ಲೂಕ ಕುರುಬರ ಸಂಘ, ದೇವರಾಜ ಅರಸು ವಸತಿ ನಿಲಯ ಸಮಿತಿ ಅವರ ಸಂಯುಕ್ತಾಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಕೇಶ ಸಿದ್ದರಾಮಯ್ಯ ಸಭಾಂಗಣ, ನೂತನ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನೆ, ಜಿಲ್ಲೆಯ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಕೇಶ ಸಿದ್ದರಾಮಯ್ಯ ಶಿಷ್ಯವೇತನ ವಿತರಣೆ, "ಸಾಧನೆ" ಸ್ಮರಣ ಸಂಚಿಕೆ ಬಿಡುಗಡೆ, ದೇವರಾಜು ಅರಸು ವೃತ್ತಿಪರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಕಟ್ಟಡ ಹಾಗೂ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸಾರ್ವಜನಿಕ ಗ್ರಂಥಾಲಯ, ರಾಕೇಶ ಸಿದ್ದರಾಮಯ್ಯ ಐಟಿಐ ಕಾಲೇಜಿನ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಕುರುಬರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಅವರಿಗೆ ಉತ್ತೇಜನ ನೀಡಬೇಕು. ಸಂಘದ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೆನೆ. ಸಂಘಟನೆಯಿಂದ ಸಮಾಜದ ಅಭಿವೃದ್ದಿಯಾಗಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆದು ಸ್ವಾಭಿಮಾನಿಯಾಗಿ ಬದುಕಬೇಕು. ಸಾಮಾಜಿಕ ಬದಲಾವಣೆಯಿಂದ ಸಂಪ್ರದಾಯಗಳು ಬದಲಾಗುತ್ತಿವೆ. ಈ ಸಮುದಾಯ ಭವನವನ್ನು ಸಂಪಾದನೆಗಾಗಿ ನಿಮರ್ಾಣ ಮಾಡಿಲ್ಲ ಬಡವವರಿಗೆ ಹೊರೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಮಾತನಾಡಿ, 1991 ರಿಂದ ಜಿಲ್ಲೆಯಲ್ಲಿ ಕುರುಬ ಸಮುದಾಯದಿಂದ ನಡೆದ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿವೆ. ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬಂದ ನಂತರ ಕುರುಬರು ತಮ್ಮನ್ನು ತಾವು ಗುರುತಿಸುವಂತಾಗಿದೆ. ಸಿದ್ದರಾಮಯ್ಯ ಅವರು ಎಲ್ಲ ವರ್ಗದವರ ಅಭಿವೃದ್ದಿಗಾಗಿ 100 ಕೋಟಿ ರೂಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ಸಮಾನತೆ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕುರುಬರ ಸಮಾಜದಿಂದ ಸಹಕಾರ ಸಂಘ ನಿರ್ಮಾಣವಾಗಲಿ ಎಂದು ಹೇಳಿದರು.
ವರುಣಾ ಶಾಸಕ ಡಾ.ಯತೀಂದ್ರ ಅವರು ಮಾತನಾಡಿ, ಈ ಹಿಣದಿನ ಸಿದ್ದರಾಮಯ್ಯ ಅವರು ನೇತೃತ್ವದ ಸರಕಾರದಲ್ಲಿ ಶೋಷಿತ, ಹಿಂದುಳಿದ ವರ್ಗಗಳು ಹಾಗೂ ದಲಿತರ ಅಭಿವೃದ್ಧಿ ಹಾಗೂ ಶೈಕ್ಷಣಿಕವಾಗಿ ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ನಂತರ ಬಂದ ಸರಕಾರಗಳು ಅವುಗಳನ್ನು ಮುಂದುವರೆಸಲಿಲ್ಲ ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿದ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ, ರಾಜಕೀಯದ ಬಹುದೊಡ್ಡ ಅಸ್ತ್ರವಾದ ಸಹಕಾರ ರಂಗದಲ್ಲಿ ಕುರುಬ ಸಮಾಜದ ಕಣಗಿನಹಾಳದ ಸಹಕಾರಿ ಪಿತಾಮಹಾ ಎಸ್.ಎಸ್.ಪಾಟೀಲರವರ ಬಹುದೊಡ್ಡ ಕೊಡುಗೆಯಿದೆ. ಅದರಂತೆ ನಗರದಲ್ಲಿ ಹತ್ತು ಹಲವು ಸಂಸ್ಥೆಗಳನ್ನು ಕಟ್ಟಿ ಇತರೆ ಸಮುದಾಯಕ್ಕೆ ಸೇವೆ ಸಹಕಾರ ನೀಡುತ್ತಿರುವ ಕುರುಬರ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರೇರಣೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ 8 ಜನ ವಿದ್ಯಾರ್ಥಿಗಳಿಗೆ ಲ್ಯಾಪಟ್ಯಾಪ್ ಸೇರಿದಂತೆ ಒಟ್ಟು 137 ವಿದ್ಯಾಥರ್ಿಗಳಿಗೆ ಶಿಷ್ಯವೇತನ ವಿತರಣೆ, "ಸಾಧನೆ" ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಹದೇವ ಯರಗುಪ್ಪ ಅವರ "ಸಾಚಿ" ಪುಸ್ತಕ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಬಸವರಾಜ ಶಿವಣ್ಣವರ, ಜಿಪಂ ಅಧ್ಯಕ್ಷ ಸಿದ್ದಲಿಂಗೆಶ್ವರ ಪಾಟೀಲ, ಮಾಜಿ ಶಾಸಕರಾದ ಜಿ.ಎಸ್.ಪಾಟೀಲ, ಡಿ.ಆರ್.ಪಾಟೀಲ, ಬಿ.ಆರ್.ಯಾವಗಲ್, ಶ್ರೀಶೈಲಪ್ಪ ಬಿದರೂರ, ರಾಮಕೃಷ್ಣ ದೊಡ್ಡಮನಿ, ಎಸ್.ಎನ್.ಪಾಟೀಲ, ವಿ.ಆರ್.ಗುಡಿಸಾಗರ, ತಾಪಂ ಅಧ್ಯಕ್ಷ ಎಸ್.ಎಸ್.ಪಾಟೀಲ, ವೈ.ಎನ್.ಗೌಡರ, ಡಾ.ಡಿ.ಎಲ್.ಕಲ್ಲಕುಟಿಗರ, ಡಿ.ಡಿ. ಮಾಳಗಿ,ವಿ.ಕೆ. ಕುರಡಗಿ, ಜಯದೇವ ಮೆಣಸಗಿ, ಎಸ್.ಪಿ ಬಳಿಗಾರ, ಶಿವಾನಂದ ಕರಿಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.