ಪುನರಾಯ್ಕೆಗೆ ಕಾಶಿ ಪೀಠದ ಜಗದ್ಗುರೂಜಿ ಸಂತಸ

ಲೋಕದರ್ಶನವರದಿ

ಧಾರವಾಡ 17 : ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷರಾಗಿ ಹಿರಿಯ ರಾಜಕಾರಣಿ, ಉದ್ಯಮಿ ಡಾ. ಶಾಮನೂರು ಶಿವಶಂಕರಪ್ಪ ಅವರು ಮುಂದಿನ 5 ವರುಷಗಳ ಅವಧಿಗೆ ಸವರ್ಾನುಮತದಿಂದ ಪುರಾಯ್ಕೆಯಾಗಿರುವುದನ್ನು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸ್ವಾಗತಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. 

ಈ ಹಿಂದಿನ ತಮ್ಮ ಅವಧಿಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಅವರು ಅನೇಕ ವಿವಾದಾಸ್ಪದ ವಿಷಯಗಳ ಸಂಕೀರ್ಣ ಪರಿಸ್ಥಿತಿ ಎದುರಾದಾಗಲೂ ಸಹಿತ ವೀರಶೈವ ಧರ್ಮದ ಸಮಗ್ರತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವಲ್ಲಿ ನಿರಂತರ ಶ್ರಮಿಸಿದ್ದಾರೆ. ಜೊತೆಗೆ ವೀರಶೈವ-ಲಿಂಗಾಯತದ ದ್ವಂದ್ವ ಗಳನ್ನು ನಿವಾರಿಸುವಲ್ಲಿ ಎಲ್ಲರನ್ನೂ ಒಂದುಗೂಡಿಸಿಕೊಂಡು ತಮ್ಮ ಗಟ್ಟಿಯಾದ ನಿಲುವಿನೊಂದಿಗೆ ವೀರಶೈವ ಧರ್ಮವು ಒಡೆದು ಹೋಗುವುದನ್ನು ತಪ್ಪಿಸಿದ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದವರು ಬಣ್ಣಿಸಿದ್ದಾರೆ. 

ಈಗ ಅವಿರೋಧವಾಗಿ ಮತ್ತೆ ಅಖಿಲ ಭಾರತ ವೀರಶೈವ ಮಹಾಸಭೆಯ ಸಾರಥ್ಯವನ್ನು ವಹಿಸಿಕೊಳ್ಳುವ ಮೂಲಕ ಮುಂದಿನ 5 ವರುಷಗಳ ಅವಧಿಯಲ್ಲಿ ವೀರಶೈವ ಧರ್ಮದ ಸಮಗ್ರತೆಯನ್ನು ವ್ಯಾಪಕಗೊಳಿಸಲು, ಜೊತೆಗೆ ಸರ್ವ ಸಮಾಜಗಳ ಸ್ನೇಹ-ಸಮನ್ವಯದೊಂದಿಗೆ ವೀರಶೈವ ಸಮಾಜದ ಉನ್ನತಿ ಹಾಗೂ ಸವರ್ಾಂಗೀಣ ವಿಕಾಸಕ್ಕೆ ಎಂದಿನಂತೆ ಶ್ರಮಿಸುವಂತಾಗಲಿ. ಡಾ.ಶಾಮನೂರು ಶಿವಶಂಕರಪ್ಪ ಅವರು ನಿರಂತರ ಕ್ರಿಯಾಪ್ರೇರಕವಾಗಿ ಕಾರ್ಯನಿರ್ವಹಿಸುವಲ್ಲಿ ವೀರಶೈವ ಧರ್ಮದ ಶ್ರೀಜಗದ್ಗುರು ಪಂಚಾಚಾರ್ಯರ ಕೃಪಾಶೀವರ್ಾದ ಸದಾಕಾಲ ಡಾ.ಶಾಮನೂರು ಅವರೊಂದಿಗೆ ಇರುತ್ತದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶುಭ ಹಾರೈಸಿದ್ದಾರೆ.