ಲೋಕದರ್ಶನ ವರದಿ
ಕ್ಯಾನ್ಸರ್ ರೋಗಿಗಳ ಪಾಲಿಗೆ ಡಾ. ರವೀಂದ್ರ ಜೋಶಿ ಆಶಾಕಿರಣ: ವಿಶಾಲದಾದಾ ಪಾಟೀಲ
ಕಾಗವಾಡ 09: ವೈದ್ಯಕೀಯ ರಂಗದ ಕಾಶಿಯೆಂದೆ ಪ್ರಸಿದ್ಧಿಯಾಗಿರುವ ಮಿರಜ ಪಟ್ಟಣದಲ್ಲಿ ಕರ್ನಾಟಕದಿಂದ ಆಗಮಿಸಿ, ಈ ಭಾಗದ ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿರುವ ಡಾ. ರವೀಂದ್ರ ಜೋಶಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಬಳಿ ಚಿಕಿತ್ಸೆ ಪಡೆದ ಅನೇಕ ಕಾನ್ಸರ್ ರೋಗಿಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆಂದು ಸಾಂಗಲಿ ಸಂಸದ ವಿಶಾಲದಾದಾ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಅವರು ರವಿವಾರ ದಿ. 8ರಂದು ಮಹಾರಾಷ್ಟ್ರದ ಮಿರಜ್ ಪಟ್ಟಣದ ಡಾ. ಜೋಶಿ ಅವರ ಕ್ಯಾನ್ಸರ್ ಸೆಂಟರ್ ಮತ್ತು ಹಿಮಾಟಾಲಜಿ ಕ್ಲಿನಿಕ್‌ನ 15ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡುತ್ತಿದ್ದರು.
15 ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಯಲ್ಲಿಯೇ ಖಾಸಗಿಯಾಗಿ ಆಸ್ಪತ್ರೆ ಪ್ರಾರಂಭಿಸಿದ ಹೆಗ್ಗಳಿಕೆ ಡಾ. ಜೋಶಿ ಅವರಿಗೆ ಸಲ್ಲುತ್ತದೆ. ಅವರ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನ ಅನೇಕ ಗಂಭೀರ ರೋಗಿಗಳು ಗುಣಮುಖರಾಗಿರುವುದು ಅವರ ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿಯಾಗಿವೆ. ಕಾನ್ಸರ್ ರೋಗಿಗಳಿಗೆ ಅವರ ಸೇವೆ ಹೀಗೇಯೆ ನಿರಂತರವಾಗಿರಲಿ. ನಮ್ಮ ಸಹಾಯ-ಸಹಕಾರ ಅವರಿಗೆ ಇರಲಿದೆ ಎಂದರು.
‘ಆರೋಗ್ಯಂ ಧನ್ ಸಂಪದಾ’ ಎಂಬ ಕುರಿತು ಉಪನ್ಯಾಸಕರಾಗಿ ಆಗಮಿಸಿದ್ದ ನೀತೀನ ಬಾನುಗಡೆ-ಪಾಟೀಲ ಮಾತನಾಡಿ, ಆರೋಗ್ಯ ರಕ್ಷಣೆಯ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಗಣ್ಯರು ಧನ್ವಂತರಿ ದೇವಿಯ ಪೂಜೆಯೊಂದಿಗೆ ದೀಪ ಬೆಳಗಿಸಿ, ಚಾಲನೆ ನೀಡಿದರು.
ನಂತರ ಡಾ. ಜೋಶಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕ್ಯಾನ್ಸರ್ ಪೀಡಿತರು ತಮ್ಮ ಅನಸಿಕೆ ಹಂಚಿಕೊಂಡರು. ಡಾ. ರವೀಂದ್ರ ಜೋಶಿ ಅವರು ತಮ್ಮ 15 ವರ್ಷಗಳ ವೈದ್ಯಕೀಯ ಸೇವೆಯ ಜೊತೆಗೆ ಭವಿಷ್ಯದ ಆಧುನಿಕ ಪದ್ಧತಿಯ ಚಿಕಿತ್ಸೆಯ ಕುರಿತು ಬೆಳಕು ಚೆಲ್ಲಿದರು. ಡಾ. ಮಿಲಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಿರಜ್ ಪಟ್ಟಣದ ಬಿಜೆಪಿ ಮುಖಂಡರಾದ ಸುರೇಶ ಅವಟಿ, ಡಾ. ರವೀಂದ್ರ ಜೋಶಿ, ಡಾ. ಮಿಲಿಂದ ಜೋಶಿ, ಡಾ. ಎಸ್.ವ್ಹಿ. ವಿಜಾಪೂರ, ಚಂದ್ರಕಾಂತ ಕಿತ್ತೂರೆ, ಡಾ. ಸೋಮಶೇಖರ್ ಪಾಟೀಲ್, ಡಾ. ಶಿಶಿರ್ ಗೋಸಾವಿ, ಡಾ. ದಯಾನಂದ ನಾಯಕ, ಡಾ. ಬಿ.ಟಿ. ಕುರಣೆ, ಡಾ. ಸಂಜೀವ್ ಕುಲಕರ್ಣಿ, ಡಾ. ದಿನೇಶ ಬಡಾಖ, ಡಾ. ಪ್ರಿಯದರ್ಶನ ಚಿತಳೆ, ಡಾ ವಿವೇಕ್ ಕುಲಕರ್ಣಿ, ಡಾ. ಶ್ರೀನಿಕೇತನ ಕಾಳೆ, ಡಾ. ಅಮಿತ್ ಗಾಡವೆ, ಡಾ ಭಾಸ್ಕರ ಪ್ರಾಣಿ, ಡಾ. ವಿಕ್ರಾಂತ್ ಮಗದುಮ್, ಡಾ ಚಂದ್ರಪಟ್ಟಣ, ಡಾ ಶರದ್ ದೇಸಾಯಿ, ಡಾ. ಉದಯ್ ಫಟಖ ಸೇರಿದಂತೆ ಅನೇಕ ಮುಖಂಡರು, ಹೆಸರಾಂತ ವೈದ್ಯರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಹಿತೈಷಿಗಳು ಉಪಸ್ಥಿತರಿದ್ದರು.