ಕಾರವಾರ 27:ಮಹಾತ್ಮಾ ಗಾಂಧೀಜಿಯವರಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆವಹಿಸಿ 100 ವರ್ಷಗಳು ಪೂರ್ಣಗೊಂಡಿರುವ ಅಂಗವಾಗಿ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ , ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕುಮಟಾ, ಇಲ್ಲಿ ನಡೆದ ಗಾಂಧಿ ಭಾರತ ಭಾಷಣ ಸ್ಪರ್ಧೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಗಂಗೆಕೊಳ್ಳ, ಹೋಂ ಗೋಕರ್ಣ, ಇಲ್ಲಿಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅಂಬಿಕಾ ಪ್ರದೀಪ ನಾಯಕ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಕನ್ನಡ ಶಿಕ್ಷಕಿ ಆರುಣಾ ನಾಯಕ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿನಿಯ ಯಶಸ್ಸಿಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಕೆ. ಉಮೇಶ್, ವಸತಿ ಶಾಲೆಯ ಪ್ರಾಂಶುಪಾಲ ಎನ್. ಆರ್. ನಾಯಕ ಹಾಗೂ ಸಿಬ್ಬಂದಿ ವರ್ಗ, ಪಾಲಕರು ಶುಭ ಕೋರಿದ್ದಾರೆ.