ಬೆಂಗಳೂರು, ಮಾ.30,ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಸಾವಿರಾರು ಮಂದಿ ನಿರಾಶ್ರಿತರ, ಅಸಂಘಟಿತ ವಲಯದ ಕಾರ್ಮಿಕರ, ದಿನಗೂಲಿ ದುಡಿಮೆ ಆಧಾರದಲ್ಲಿ ಜೀವನ ನಡೆಸುತ್ತಿರುವವರ, ನಿರ್ಮಾಣ ಕಾರ್ಮಿಕರ ಮತ್ತು ನಗರ ಪ್ರದೇಶದ ಬಡ ಜನರಿಗಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಸಹಾಯ ಹಸ್ತವನ್ನು ಚಾಚಲು ಮುಂದಾಗಿದೆ. ‘ಪ್ರಸ್ತುತ ನಾವು ದೊಮ್ಮಲೂರಿನ ಅಮರಜ್ಯೋತಿ ಕೊಳೆಗೇರಿ, ಚೌಡಯ್ಯ ಸ್ಮಾರಕ ಭವನದ ಸಮೀಪವಿರುವ ವೈಯಾಲಿಕಾವಲ್ ಕೊಳೆಗಗೇರಿ, ಹನುಮಂತನಗರದ ಸನ್ಯಾಸಿಕಟ್ಟೆ ಕೊಳೆಗೇರಿಯಲ್ಲಿರುವ ಸುಮಾರು 3000 ಜನರಿಗೆ ನೆರವಾಗಿದ್ದೇವೆ. ಅಲ್ಲದೇ ಹೆಬ್ಬಾಳದ (ಕುಂತಿಗ್ರಾಮ) 700 ಮಂದಿ ಚಿಂದಿಆಯುವ ಬಡವರಿಗೂ ನೆರವಾಗಿದ್ದೇವೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ತಿಳಿಸಿದ್ದಾರೆ. ಇನ್ನಷ್ಟು ಸಂಖ್ಯೆಯಲ್ಲಿ ಈ ಬಡ ಸಮುದಾಯವನ್ನು ತಲುಪಲು ಆಹಾರ ದಾನಿಗಳು ಮತ್ತು ಸ್ವಯಂ ಸೇವಕರು ನಮ್ಮೊಂದಿಗೆ ಕೈ ಜೋಡಿಸಬೇಕು”ಇದಕ್ಕಾಗಿ ದಯವಿಟ್ಟು ಇವರನ್ನು ಸಂಪರ್ಕಿಸಿ ಉಷಾ ಧನರಾಜ್ 9591143888/ 9591985287 ಮತ್ತು ಹರೀಶ್ ಕುಮಾರ್ 6362642704. “ತ್ಯಾಜ್ಯ ವಸ್ತು ಸಂಗ್ರಹ ಮಾಡುತ್ತಿದ್ದವರು, ಕಟ್ಟಡ ನಿರ್ಮಾಣ ವಲಯದ ಕುಟುಂಬದವರು ಮತ್ತು ಮಕ್ಕಳಿಗಾಗಿ ದಿನಸಿ ಕಿಟ್‍ಗಳು ಮತ್ತು ಆಹಾರ ಪ್ಯಾಕೇಟ್‍ಗಳನ್ನು ಪೂರೈಸಲು ದೇಣಿಗೆಯನ್ನು ಮತ್ತು ಸ್ವಯಂ ಸೇವಕರನ್ನು ನಾವು ನಿರೀಕ್ಷಿಸುತ್ತಿದ್ದೇವೆ. ವಿವಿಧ ಕಡೆಗಳಿಂದ ನೆರವು ಬಾರದಿದ್ದರೆ ಇದು ಕಷ್ಟದ ಕೆಲಸವೇ ಸರಿ. ನಮ್ಮೊಂದಿಗೆ ಕೈಜೋಡಿಸಿರುವ ಸಂಸತ್ ಸದಸ್ಯ ರಾಜೀವ್ ಚಂದ್ರಶೇಖರ್, ಸುವರ್ಣ ನ್ಯೂಸ್, ಜೈನ್ ಇಂಟರ್‍ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿಟೊ), ಭಾಸ್ಕರ್ಸ್ ಮನೆ ಹೋಳಿಗೆ, ಕೊಳೆಗೇರಿಗಳ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಗಿಲ್ಗಲ್ ಚಾರಿಟೇಬಲ್ ಟ್ರಸ್ಟ್‌ಗೆ ನಾವು ಆಭಾರಿಯಾಗಿದ್ದೇವೆ” ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.