ಬೆಂಗಳೂರು,
ಏ.2, ನಮ್ಮ ಬೆಂಗಳೂರು ಫೌಂಡೇಶನ್, ಕೋವಿಡ್ ಲಾಕ್‌ಡೌನ್ ನಂತರ ಅಸಂಘಟಿತ
ವಲಯದ ಕಾರ್ಮಿಕರು, ಉದ್ಯೋಗ ಕಳೆದುಕೊಂಡವರು, ಆಹಾರಕ್ಕೆ ಪರದಾಡುತ್ತಿದ್ದ ಬಡವರ
ಸಮಸ್ಯೆಗಳನ್ನು ಪರಿಹರಿಸಲು ‘ಎನ್‌ಬಿಎಫ್ ಫುಡ್ ಡೆಲಿವರಿ ಡ್ರೈವ್’ ಅನ್ನು
ಪ್ರಾರಂಭಿಸಿದೆ.ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವೈದ್ಯಕೀಯ
ಕ್ಷೇತ್ರದವರಿಗೆ ಸಹಾಯ ಮಾಡಲು ಮುಂದಾಗಿದೆ. ಇಲ್ಲಿಯವರೆಗೆ ಎನ್‌ಬಿಎಫ್ 8305 ಜನರಿಗೆ
ಆಹಾರ ಪ್ಯಾಕೆಟ್‌ಗಳು ಮತ್ತು ದಿನಸಿ ಕಿಟ್‌ಗಳನ್ನು ತಲುಪಿಸಿದೆ, ಇದರಲ್ಲಿ ದೈನಂದಿನ
ಕೂಲಿ ಕಾರ್ಮಿಕರು, ನಿರಾಶ್ರಿತರು, ಭಿಕ್ಷುಕರು, ಕೊಳೆಗೇರಿ ನಿವಾಸಿಗಳು, ಕಡಿಮೆ ಆದಾಯದ
ಗುಂಪುಗಳು ಮತ್ತು ಬೆಂಗಳೂರಿನಾದ್ಯಂತ ಏಕಾಂಗಿಯಾಗಿ ವಾಸಿಸುವ ಹಿರಿಯರಿಗೆ (ದೊಮ್ಮಲೂರು
ವೈಯಾಲಿಕಾವಲ್, ಹನುಮಂತನಗರ, ಕೆ.ಜಿ.ಹಳ್ಳಿ, ನಾಗವಾರ, ಹೆಬ್ಬಾಳ ಮುಂತಾದ ಕಡೆ ಕೊಳೆಗೇರಿ
ಮತ್ತು ಶೆಡ್ ಗಳಲ್ಲಿ ವಾಸಿಸುವವರು) ಆಹಾರ ಪದಾರ್ಥಗಳನ್ನು ತಲುಪಿಸಿದೆ.
ನಮ್ಮ
ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಈ ಬಗ್ಗೆ ವಿವರ ನೀಡಿ,
ಬಡಕುಟುಂಬಗಳಿಗೆ ಮತ್ತು ಮಕ್ಕಳಿಗೆ ದಿನಸಿ ಕಿಟ್‌ಗಳು ಮತ್ತು ಆಹಾರ ಪ್ಯಾಕೆಟ್‌ಗಳನ್ನು
ಒದಗಿಸಲು ನಾವು ಹಣ ಮತ್ತು ಸ್ವಯಂಸೇವಕರನ್ನು ನಿರೀಕ್ಷಿಸುತ್ತಿದ್ದೇವೆ. ಬಹಳಷ್ಟು ಜನರ
ಬೆಂಬಲವಿಲ್ಲದೆ ಈ ಕಾರ್ಯ ಅಸಾಧ್ಯ. ಸಂಸದ ರಾಜೀವ್ ಚಂದ್ರಶೇಖರ್, ಸುವರ್ಣ ನ್ಯೂಸ್, ಜೈನ್
ಇಂಟರ್ ನ್ಯಾಷನ್ಲಲ್ ಟ್ರೇಡ್ ಆರ್ಗನೈಸೇಶನ್ (ಜಿಐಟಿಒ), ಆಟ್ರಿಯಾ ಫೌಂಡೇಶನ್, ಭದ್ವಾಡ್
ಭಾವ, ದೇಸಿ ಮಸಾಲಾ, ಭಾಸ್ಕರ್ ಅವರ ಮಾನೆ ಹೋಲಿಗೆ, ಪ್ರೆಸ್ಟೀಜ್ ಗುಲ್ಮೋಹರ್ ಮತ್ತು
ಹಲಸೂರಿನ ಗುರುದ್ವಾರದ ನಿವಾಸಿಗಳು, ಸ್ಲಂಗಳಲ್ಲಿ ಸಕ್ರಯವಾಗಿ ಕಾರ್ಯನಿರ್ವಹಿಸುತ್ತಿರುವ
ಗಿಲ್ಗಾಲ್ ಚಾರಿಟೇಬಲ್ ಟ್ರಸ್ಟ್, ಮತ್ತು ಇತರರು ಕೈಜೋಡಿಸಿದ್ದಾರೆ ಎಂದು ತಿಳಿಸಿದರು.ಸಾರ್ವಜನಿಕರು
ಕೂಡ ಎನ್‌ಬಿಎಫ್ ಆಹಾರ ವಿತರಣಾ ಡ್ರೈವ್‌ಗೆ ದಾನ ಮಾಡಬಹುದು ಮತ್ತು 800 ರೂ ಅಥವಾ
ಬಹುಸಂಖ್ಯೆಯಲ್ಲಿ ಕುಟುಂಬವನ್ನು ಬೆಂಬಲಿಸಲು ಆಯ್ಕೆ ಮಾಡಬಹುದು. ಪ್ರತಿ ಕುಟುಂಬ
ಕಿಟ್‌ನಲ್ಲಿ - 10 ಕೆಜಿ ರೈಸ್, 2 ಕೆಜಿ ಅಟ್ಟಾ, 1 ಕೆಜಿ ದಾಲ್, 1 ಕೆಜಿ ಶುಗರ್, 1
ಕೆಜಿ ಸಾಲ್ಟ್, 1 ಲೀಟರ್ ಆಯಿಲ್ ಮತ್ತು 2 ಸಾಬೂನುಗಳಿವೆ ಎಂದು ಅವರು ಹೇಳಿಕೆಯಲ್ಲಿ
ತಿಳಿಸಿದ್ದಾರೆ.