ಕೃಷ್ಣೆಯಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಗಂಭೀರ

ಬಾಗಲಕೋಟೆ, ಆ. 10     ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ   ಪರಿಣಾಮ ಅಲಮಟ್ಟಿ ಜಲಾಶಯದಿಂದ ದಾಖಲೆಯ 5.30 ಲಕ್ಷ ಕ್ಯೂಸೆಕ್ ನೀರು  ಹೊರಗೆ ಬಿಡಲಾಗುತ್ತಿದ್ದು ಪ್ರವಾಹ ಪರಿಸ್ಥಿತಿ  ಮತ್ತಷ್ಟು ಬಿಗಡಾಯಿಸಿದೆ  ಎಂದು ಕೃಷ್ಟ ಜಲಭಾಗ್ಯ ನಿಗಮದ  ಮೂಲಗಳು ತಿಳಿಸಿವೆ. 

ಕೃಷ್ಣ ಮತ್ತು ಭೀಮಾ ನದಿಗಳ ತೀರದಲ್ಲಿ ಜನ ಮತ್ತು ಜಾನುವಾರುಗಳ ಸುರಕ್ಷತೆಗಾಗಿ ಅಗತ್ಯ  ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಅಲಮಟ್ಟಿ ಜಲಾಶಯಕ್ಕೆ ಶನಿವಾರ  3,49,526 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು  3.67 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. 

ಇಂದಿನ ನೀರಿನ ಮಟ್ಟ  517.080 ಮೀಟರ್ ಗೆ ಮುಟ್ಟಿದ್ದು ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ.   

ಜಲಾಶಯದಿಂದ  ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿದ ಪರಿಣಾಮವಾಗಿ, ನದಿ ಪಾತ್ರದ  ಹೆಚ್ಚಿನ  ಪ್ರದೇಶಗಳು ಜಲಾವೃತವಾಗಿ,  ಪ್ರವಾಹದಲ್ಲಿ ಮುಳುಗಿವೆ. ಅಣೆಕಟ್ಟಿನ  ಉದ್ಯಾನವನಕ್ಕೂ  ನದಿ ನೀರು ನುಗ್ಗಿ ಅನೇಕ ಮರಗಳೂ ಬುಡಮೇಲಾಗಿವೆ.  

ಮಸೂತಿ ಗ್ರಾಮದ ದಂಡೆಯಲ್ಲಿರುವ 38 ಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ಸಿಕ್ಕಿ ಕುಸಿದುಬಿದ್ದಿವೆ  

ಎಂದು ಅಧಿಕಾರಿಗಳು ತಿಳಿಸಿದ್ದಾರೆ.