ಬೆಂಗಳೂರು, ಆ 8 ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರಿಗೆ ಅನಾನುಕೂಲವಾಗಿದೆ.
ಪಂಚಪುರ್ ಮತ್ತು ಗೋಕಾಕ್ ಸೇರಿದಂತೆ ಪುಣೆ ವಲಯದ ವಿವಿಧೆಡೆ ರೈಲು ಹಳಿಗಳ ಮೇಲೆ ನೀರು ನಿಂತಿದ್ದು ಸುಮಾರು 18 ರೈಲುಗಳನ್ನು ರದ್ದುಪಡಿಸಲಾಗಿದೆ / ಮಾರ್ಗಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಆಗಸ್ಟ್ 8 ರಂದು ಯಶವಂತಪುರ - ಜೈಪುರ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 82653); ಆಗಸ್ಟ್ 10 ರಂದು ಜೈಪುರ - ಯಶವಂತಪುರ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 82654), ಆಗಸ್ಟ್ 8 ರಂದು ಛತ್ರಪತಿ ಶಿವಾಜಿ ಮಹಾರಾಜ್ ಟಮರ್ಿನಸ್ ಮುಂಬೈ - ವಿಜಯಪುರ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 51029), ಆಗಸ್ಟ್ 8 ಮತ್ತು 9 ರಂದು ವಿಜಯಪುರ - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 51030); ಆ 8 ರಿಂದ 11 ರವರೆಗೆ ಹುಬ್ಬಳ್ಳಿ - ಲೋಕಮಾನ್ಯ ತಿಲಕ್ ರೈಲು (ರೈಲು ಸಂಖ್ಯೆ 17317); ಆ 9 ರಿಂದ 12 ರವರೆಗೆ ಲೋಕಮಾನ್ಯ ತಿಲಕ್ ಟಮರ್ಿನಿಸ್ - ಹುಬ್ಬಳ್ಳಿ (ರೈ ಸ - 17318); ಆ 8 ರಂದು ಓಖಾ - ಟ್ಯುಟಿಕೊರಾನ್ ಎಕ್ಸ್ ಪ್ರೆಸ್ (ರೈ ಸ 19568); ಆ 11 ರಂದು ಟ್ಯೂಟಿಕೊರಾನ್ - ಓಖಾ ಎಕ್ಸ್ ಪ್ರೆಸ್ (ರೈ ಸ 19567); ಆ 9 ರಂದು ಬಾರ್ಮರ್ - ಯಶವಂತಪುರ ಎಕ್ಸ್ ಪ್ರೆಸ್ (ರೈ ಸ 14806); ಆ 12 ರಂದು ಯಶವಂತಪುರ - ಬಾರ್ಮರ್ ಎಕ್ಸ್ ಪ್ರೆಸ್ (ರೈ ಸ 14805); ಆ 8 ರಂದು ಮೀರಜ್ - ಹುಬ್ಬಳ್ಳಿ ಎಕ್ಸ್ ಪ್ರೆಸ್ (11047) ಮತ್ತು ಮೀರಜ್ - ಕ್ಯಾಸಲ್ ರಾಕ್ ಪ್ಯಾಸೆಂಜರ್ ರೈಲು (51405) ಮತ್ತು ಮೀರಜ್ - ಬೆಳಗಾವಿ ಪ್ಯಾಸೆಂಜರ್ ರೈಲು (51462) ರದ್ದುಪಡಿಸಲಾಗಿದೆ.
ನಿರಂತರ ಮಳೆ ಹಾಗೂ ಹಳಿಗಳ ಮೇಲೆ ನೀರು ನಿಂತಿದ್ದು ಹಲವು ರೈಲುಗಳು ತಡವಾಗಿ ಬರಲಿದ್ದು ಪ್ರಯಾಣಿಕರು ಸಹಕರಿಸಬೇಕೆಂದು .ಇಲಾಖೆ ಮನವಿ ಮಾಡಿದೆ.