ಕಲಬುರಗಿ-ಮುಂಬೈ ನಡುವೆ ವಿಮಾನ ಹಾರಾಟ

ಕಲಬುರಗಿ, ಜೂ.11,ಕಲಬುರಗಿ ವಿಮಾನ ನಿಲ್ದಾಣದಿಂದ ಕಲಬುರಗಿ-ಮುಂಬೈ (ಬೆಂಗಳೂರು ಮತ್ತು ಬೆಳಗಾವಿ ಮಾರ್ಗ) ಮಾರ್ಗವಾಗಿ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ‌ ಮುಂದಾಗಿದೆ. ಪ್ರಸ್ತುತ ಸ್ಟಾರ್ ಏರ್ ಸಂಸ್ಥೆ ಪ್ರತಿ ಶನಿವಾರದಂದು ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದ್ದು, ಇದೇ ಜೂ. 13 ರಂದು ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಕಲಬುರಗಿ-ಮುಂಬೈ ನಡುವೆ ಸಂಸ್ಥೆಯ ವಿಮಾನ ಸಂಚರಿಸಲಿದೆ. ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ.OG-118 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆ.10.20 ಗಂಟೆಗೆ ಹೊರಟು 11.25ಕ್ಕೆ ಬೆಂಗಳೂರು ತಲುಪಲಿದೆ. ಇದೇ ವಿಮಾನ OG-105 ಸಂಖ್ಯೆಯೊಂದಿಗೆ 1 ಗಂಟೆಗೆ ಬೆಳಗಾವಿಗೆ ಹಾಗೂ OG-111 ಸಂಖ್ಯೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.40 ಗಂಟೆಗೆ ಲ್ಯಾಂಡ್ ಆಗಲಿದೆ ಎಂದು ಕಲಬುರಗಿ ವಿಮಾನ ಜಿಲ್ದಾಣದ ಎ.ಎ.ಐ ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದ್ದಾರೆ.